-
ವಿವರ
-
ಬೋಧಕ ಸಿಬ್ಬಂದಿ
-
ವಿಭಾಗೀಯ ಚಟುವಟಿಕೆಗಳು
ವಿಭಾಗದ ಕುರಿತು ವಿಭಾಗದ ಹೆಸರು: ಎನ್.ಎಸ್.ಎಸ್. ಕೋಶ ಮತ್ತು ಎನ್.ಎಸ್.ಎಸ್. ಘಟಕ
ವಿವರ:
ನಮ್ಮ ರಾಷ್ಟ್ರ ಮುಂದುವರಿಯಬೇಕಾದರೆ, ನಮ್ಮ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರೆ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಕನಸಾಗಿತ್ತು. ಭಾರತ ಸರ್ಕಾರವು ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮಾಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ದಿನಾಂಕ: 24/09/1969 ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ಎ.ಕೆ.ಆರ್.ವಿ.ರಾವ್ ಅವರಿಂದ ಉದ್ಘಾಟಿತವಾಯಿತು.
ಕರ್ನಾಟಕದಉತ್ತರ ಗಡಿಭಾಗದ ಬೆಳಗಾವಿಯಲ್ಲಿ ನೆಲೆಗೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ತನ್ನ ಅಸ್ತಿತ್ವ ಕಂಡುಕೊಂಡಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಕನಸು ಹಾಗೂ ಆಶೋತ್ತರಗಳೊಂದಿಗೆ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪೂರ ಹಾಗೂ ಬಾಗಕೋಟ ಈ ಮೂರು ಜಿಲ್ಲೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 368ಮಹಾವಿದ್ಯಾಲಯಗಳು ಸಂಯೋಜಿತಗೊಂಡದ್ದು 275 ಕಾಲೇಜುಗಳಲ್ಲಿ ಒಟ್ಟು 275 ಎನ್.ಎಸ್.ಎಸ್. ಘಟಕಗಳಿವೆ. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ 25000 ಎನ್.ಎಸ್.ಎಸ್. ಸ್ವಯಂಸೇವಕರನ್ನು ಒಳಗೊಂಡಿದೆ. ಶೈಕ್ಷಣಿಕ ವಿಸ್ತರಣೆಯ ಒಂದು ಭಾಗವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಯುವ ಪೀಳಿಗೆಗೆ ಪ್ರೇರಕವಾಗಬಲ್ಲ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರಯವ ಎನ್.ಎಸ್.ಎಸ್. ಕೋಶಕ್ಕೆ ಸನ್ಮಾನ್ಯ ಕುಲಪತಿಗಳವರ, ಕುಲಸಚಿವರ ಸಂಪೂರ್ಣ ಬೆಂಬಲ ದೊರೆಯುತ್ತಿದೆ.
“ನನಗಲ್ಲ ನಿಮಗೆ” ಎಂಬುದು ರಾಷ್ಟ್ರೀಯ ಯೋಜನೆಯ ಧ್ಯೇಯ ವಾಕ್ಯವಾಗಿದೆ. ಇದರ ಸಾರಾಂಶ ನಾನು ನನಗಾಗಿ ಮಾತ್ರವಲ್ಲ. ನಿಮ್ಮೆಲ್ಲರಿಗಾಗಿಯೂ ಎಂಬುದಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವ್ಯಕ್ತಿಯು ಸಮಾಜದ ಅಭ್ಯದಯದ ಮೂಲಕ ತನ್ನ ಅಭ್ಯದಯವನ್ನು ಕಾಣುತ್ತಾನೆ.
ದೈನಂದಿನ ಮತ್ತು ವಿಶೇಷ ಶಿಬಿರಗಳಸೇವಾ ಕಾರ್ಯಗಳು:
- ಪರಿಸರ ಅಭಿವೃದ್ಧಿ ಹಾಗೂ ಸದುಪಯೋಗ.
- ಅಂತರ್ಜಲ ಸಂರಕ್ಷಣೆ, ಮಳೆನೀರಿನ ಸಂಗ್ರಹ ಹಾಗೂ ಸದುಪಯೋಗ.
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು.
- ಸಮಗ್ರ ಅಭಿವೃಧಿಗಾಗಿ ಗ್ರಾಮಗಳನ್ನು ಅಥವಾ ಕೊಳಚೆ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವುದು.
- ಸಾಕ್ಷರತೆ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವುದು.
- ಸಾಕ್ಷರತಾ ಕೇಂದ್ರಗಳನ್ನು ನಡೆಸುವುದು.
- ಪುಸ್ತಕ ನಿಧಿಗಳನ್ನು ಸ್ಥಾಪಿಸುವುದು
- ರಕ್ತದ ಗುಂಪನ್ನು ಗುರುತಿಸುವುದು ಮತ್ತು ಇಚ್ಛೆಯಿಂದ ರಕ್ತದಾನ ಮಾಡುವುದು.
- ಗಿಡಮರಗಳನ್ನು ಬೆಳೆಸುವುದು.
- ಜನತಾ ಮನೆ, ಸಮುದಾಯ ಭವನ, ಶಾಲಾ ಕೊಠಡಿ ಇತ್ಯಾದಿಗಳ ನಿರ್ಮಾಣ ಮಾಡುವುದು.
- ರಸ್ತೆ, ಆಟದ ಮೈದಾನ ಹಾಗೂ ಶೌಚಾಲಯಗಳನ್ನು ನಿರ್ಮಾಣ ಮಾಡುವುದು.
- ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ಬಗ್ಗೆ ಜಾಗೃತಿ ಮೂಡಿಸುವುದು.
- ಪ್ರವಾಹ ಹಾಗೂ ಕ್ಷಾಮ ಮತ್ತಿತರ ಆಪತ್ಕಾಲದಲ್ಲಿ ಪರಿಹಾರ ಕಾರ್ಯಕ್ರಗಳನ್ನು ಕೈಗೊಳ್ಳುವುದು.
- ಪ್ರಾಚ್ಯವಸ್ತು-ಸ್ಮಾರಕಗಳ ಸಂರಕ್ಷಣೆ ಮಾಡುವುದು.
- ಕಲಿತ ತಾಂತ್ರಿಕ ಜ್ಷಾನವನ್ನು ತಾಂತ್ರಿಕ ಚಟುವಟಿಕೆಗಳಲ್ಲಿ ಬಳಸುವುದು.
- ಗೃಹಬಳಕೆ ವಿದ್ಯುತ್ ಉಪಕರಣಗಳ ಮತ್ತು ವಾಹನಗಳ ಸ್ವಯ ರಿಪೇರಿ ಕಲಿಯುವುದು.
- ಮಹಿಳೆಯರಿಗೆ ಟೈಲರಿಂಗ್, ಎಂಬ್ಯ್ರಾಯಿಡರಿ, ನಿಟ್ಟಿಂಗ್, ಸ್ಕ್ರೀನ್ ಪ್ರಿಂಟಿಂಗ್ , ಕಂಪ್ಯೂಟರ್ ಶಿಕ್ಷಣ ಮೊದಲಾದವುಗಳನ್ನು ಕಲಿಸಿವುದು.
ಈ ಯೋಜನೆಯಲ್ಲಿ ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕ ಪಂಚಾಯತ್, ಗ್ರಾಮಪಂಚಾಯತ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.
ಪ್ರಮಾಣ ಪತ್ರ: ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ 240 ಗಂಟೆಗಳ ಕಾಲ ದೈನಂದಿನ ಸೇವಾ ಚಟುವಟಿಕೆಗಳ ಮತ್ತು ಕನಿಷ್ಠ ಒಂದು ವಿಶೇಷ ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ವಯಂ ಸೇವಕರಿಗೆ ವಿಶ್ವವಿದ್ಯಾಲಯದ/ನಿರ್ದೇಶನಾಲಯದ ರಾಷ್ಟ್ರೀಯ ಸೇವಾ ಯೋಜನೆ ಪ್ರಮಾಣ ಪತ್ರ ನೀಡಲಾಗುವುದು.
ರಾಷ್ಟ್ರೀಯ ಸೇವಾ ಯೋಜನೆಯ ಲಾಂಭನರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಒರಿಸ್ಸಾ ರಾಜ್ಯದ ಕೋನಾರ್ಕ್ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಒಂದು ಚಕ್ರ. ಈ ಚಕ್ರ ಯುವಶಕ್ತಿಯ ನಿರಂತರ ಸಂಕೇತ.
ಕ್ರಮ ಸಂಖ್ಯೆ ಭೋದಕ ಸಿಬ್ಬಂದಿಯ ಹೆಸರು ಭಾವಚಿತ್ರ ವಿದ್ಯಾರ್ಹತೆ ಹುದ್ದೆ ಸಂಶೋಧನೆ ವಿಷಯ ಇಮೇಲ್ & ದೂರವಾಣಿ 01 ಪ್ರೊ. ಎಸ್. ಓ. ಹಲಸಗಿ ಎಂಕಾಂ, ಎಂಕಾಂ ಎಂಫಿಲ್, ಬಿಎಡ್, ಪಿಎಚ್.ಡಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಬ್ಯಾಂಕಿಗ ಮತ್ತು ಮಾರ್ಕೆಟಿಂಗ್ sohalasagi@gmail.com
997284157502 ಡಾ. ಮಹಾಂತಪ್ಪ ಬ. ಚಲವಾದಿ. ಎಮ್ ಎ, ಪಿಎಚ್. ಡಿ ಎನ.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಘಟಕ- I ನಗರಗಳ ಬೆಳೆವಣಿಗೆ mahantbc12@gmail.com
944901893503 ಡಾ. ಮಹೇಶ್ವರಿ ಎಸ್. ಕಾಚಾಪೂರ ಎಮ್ ಎಸ್ ಡಬ್ಲು ಪಿಎಚ್. ಡಿ ಕಾರ್ಯಕ್ರಮ ಅಧಿಕಾರಿ ಘಟಕ- II ವುಮನ್ ಎಟ್ ವರ್ಕ: ಎ ಸೋಶಿಯಲ್ ವರ್ಕ ಸ್ಟಡಿ ಆನ್ ಪೋಲಿಸ್ ಕಾನ್ಸಟೇಬಲ್ಸ್ kmaheshwari82@gmail.com
9886860606ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಚಟುವಟಿಕೆಗಳು
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಈ ಕೆಳಕಂಡ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಾಗುವುದು.
- ದೈನಂದಿನ ಚಟುವಟಿಕೆ: ದೈನಂದಿನ ಚಟುವಟಿಕೆಯಲ್ಲಿ ಸ್ವಯಂ ಸೇವಕ ಒಂದು ವರ್ಷದಲ್ಲಿ ಕನಿಷ್ಠ 120 ಗಂಟೆಗಳಂತೆ 2 ವರ್ಷಗಳ ಅವಧಿಯಲ್ಲಿ (ವಿಷೇಶ ಶಿಬಿರ ಕಾರ್ಯಕ್ರಮವನ್ನು ಹೊರತುಪಡಿಸಿ) 240 ಗಂಟೆಗಳ ಸೇವಾಕಾರ್ಯವನ್ನು ಮಾಡಲೇಬೆಕು. ವಾರದಲ್ಲಿ ಕನಿಷ್ಠ 4 ಗಂಟೆ ಚಟುವಟಿಕೆಗಳ ಜೊತೆಗೆ ದತ್ತು ಗ್ರಾಮಗಳಲ್ಲಿ ನಡೆಸಬಹುದಾದ ವಾರಾಂತ್ಯ ಶಿಬಿರಗಳು ಇದರಲ್ಲಿ ಸೇರಿರುತ್ತವೆ.
- ವಿಶೇಷ ಶಿಬಿರ ಕಾರ್ಯಕ್ರಮ:ವಿಶೇಷ ಶಿಬಿರವನ್ನು ದತ್ತು ಗ್ರಾಮದಲ್ಲಾಗಲಿ ಅಥವಾ ಬೇರೆ ಎಲ್ಲಾದರೂ 7 ದಿನಗಳ ಕಾಲ ನಡೆಸಲಾಗುವುದು. ಈ ಅವಧಿಯಲ್ಲಿ ಸ್ವಯಂಸೇವಕರು ತಮ್ಮ ಮನೆ ಮತ್ತು ಕಾಲೇಜಿನಿಂದ ದೂರವಿದ್ದು ಹೆಚ್ಚು ಪರಿಣಾಮಕಾರಿ ಸೇವಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
- ರಾಜ್ಯ, ರಾಷ್ಟ್ರ, ಜಿಲ್ಲಾ ಮಟ್ಟದ ನಾಯಕತ್ವ ಶಿಬಿರ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
ರಾಷ್ಟ್ರೀಯ ಭಾವೈಕ್ಯತಾಶಿಬಿರ ಮತ್ತು ಒಂದು ದಿನದ ಪುನಃಶ್ಚೇತನ ಕಾರ್ಯಕ್ರಮ
ಫಲಶೃತಿಗಳು:
ಸ್ವಯಂಸೇವಕರಿಗೆ:
- ಅರ್ಹ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ
- ಸ್ನಾತಕೋತ್ತರ ಪ್ರವೇಶಗಳಲ್ಲಿ ಮೀಸಲಾತಿ.
- ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರ ಮಟ್ಟದ ಸಾಧನೆಗೆ ಪ್ರಶಸ್ತಿ, ನಗದು ಪುರಸ್ಕಾರ.
- ಅಂತರಾಷ್ಟ್ರೀಯ ಯುವ-ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.
- ಯುವಜನೋತ್ಸವ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ರಾಷ್ಟ್ರೀಯ ಏಕತಾ ಶಿಬಿರ, ಸಾಹಸ ಶಿಬಿರ, ವಿಚಾರ
- ಯುವಜನೋತ್ಸವ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ರಾಷ್ಟ್ರೀಯ ಏಕತಾ ಶಿಬಿರ, ಸಾಹಸ ಶಿಬಿರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವಿಕೆಗೆ ಅವಕಾಶ.
- ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.
ಬ). ಎನ್. ಎಸ್.ಎಸ್ ಅಧಿಕಾರಿಗಳಿಗೆ:
- ಯುವ ಸೇವಾ ಪಡೆ ನಿರ್ಮಾಣದ ತೃತ್ತಿ ಮತ್ತು ಮಹಾವಿದ್ಯಾಲಯದ ಪ್ರಮುಖ ಆಸ್ಥಿ.
- 3 ವರ್ಷಗಳ ಸೇವೆಯನ್ನು ಸೇವಾ ಪುಸ್ತಕದಲ್ಲಿ ದಾಖಲಿಸುವುದು.
- ಮುಂಬಡ್ತಿನಗಳಲ್ಲಿ ಪರಿಗಣನೆ.
- ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ಥಿಗಳು.
ಕ). ಮಹಾವಿದ್ಯಾಲಯಗಳಿಗೆ:-
- ಮಹಾವಿದ್ಯಾಲಯಗಳಲ್ಲಿ ಸೇವಾ ಶಿಸ್ತು ನಿರ್ಮಾಣ.
- ಮಹಾವಿದ್ಯಾಲಯಗಳಲ್ಲಿ ಸಂಪೂರ್ಣ ಸ್ವಚ್ಛತೆಯ ಪರಿಕಲ್ಪನೆ ಮತ್ತು ಭಾವನೆ.
- ನ್ಯಾಕ್ ಮಾನ್ಯತೆಯಲ್ಲಿ ಸಮಾಜ ಸೇವೆಯ ಪ್ರಾಧಾನ್ಯತೆ.
- ಐಕ್ಯತೆಯ ಪರಿಸರ.
- ಪ್ರಶಸ್ತಿಗಳು ಮಹಾವಿದ್ಯಾಲಯದ ಸಾಧನೆಗಳ ಹೆಗ್ಗುರುತು.
ಇವರೊಂದಿಗೆ, ವಿಶ್ವವಿದ್ಯಾಲಯ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಇಡೀ ಸಮುದಾಯ ಎನ್.ಎಸ್.ಎಸ್. ಸುಸಂಸ್ಕøತ ಪ್ರಜೆಗಳ ಪ್ರತಿಫಲದ ಪ್ರಯೋಜನ ಹೊಂದಿವೆ.