Hide Main content block

ಪ್ರಸಾರಾಂಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ,ಬೆಳಗಾವಿ


ನಿರ್ದೇಶಕರು
Prof.Ashok D’Souza
E-mail : prasaranga@rcub.ac.in

ಪ್ರಸಾರಾಂಗದ ಮಾಹಿತಿ: ಸಾಹಿತ್ಯ ನಿಂತ ನೀರಲ್ಲ. ಅದುಅವ್ಯಾಹತವಾಗಿ ಹರಿಯುತ್ತಿರುವಜೀವಂತ ಪ್ರವಾಹ ಹೀಗಾಗಿ ಬದಲಾಗುತ್ತಿರುವ ಹೊಸ ಸಂವೇದನೆಗಳನ್ನು ಅಧ್ಯಯನಿಸುವ ತುರ್ತುಅಗತ್ಯ ನಮ್ಮ ವಿದ್ಯಾರ್ಥಿಗಳ ಮುಂದಿದೆ.ಸಾಹಿತ್ಯದಚಿಂತನಕ್ರಮರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ಹಲವು ಕುತೂಹಲಗಳ ಮೂಲಕ ಸಮಸ್ಯೆಗಳೆಡೆಗೆ ಪ್ರವಹಿಸುವ ಚಿಂತನ ಶೀಲತೆ ಇಂದು ಬೆಳೆಯ ಬೇಕಾಗಿದೆ.ಈ ನಿಟ್ಟಿನಲ್ಲಿರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಪೂರಕವಾಗಿ ಸಂಕಲ್ಪಬದ್ಧವಾದದೃಢವಾದ ಬದಲಾವಣೆಗಳನ್ನು ಅಳವಡಿಸಿಕೊಂಡಿರುವ ರಾಣಿಚನ್ನಮ್ಮ ವಿಶ್ವವಿದ್ಯಾಲಯ ಪ್ರಸಾರಾಂಗವು ದಿಟ್ಟ ಹೊಸ ಹೆಜ್ಜೆಗಳನ್ನಿಟ್ಟಿದೆ. ವಿದ್ಯಾರ್ಥಿಗಳ ಸಕ್ರಿಯ ಹಾಗೂ ಗಟ್ಟಿಯಾದಚಿಂತನಕ್ರಮವನ್ನುರೂಪಿಸುವ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಟುಗಳನ್ನೊಳಗೊಂಡ ಮಾದರಿ ಪಠ್ಯಪುಸ್ತಕಗಳನ್ನು ¥್ರಕಟಿಸಿ ವಿದ್ಯಾರ್ಥಿಗಳ ಚಿಂತನಾಕ್ರಮ ಮತ್ತು ಆಲೋಚನಾಕ್ರಮಗಳಿಗೆ ಹೊಸ ನೆಲೆಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.ಈಚಿನ 50 ವರ್ಷಗಳ ಪಠ್ಯಕೇಂದ್ರಿತ ನೆಲೆಯ ಚಿಂತನೆಗಳು.ಹೊಸ ಕಾಲದ ಅವಶ್ಯಕತೆಗಳನ್ನು ಅಳವಡಿಸಿಕೊಂಡು ಈ ಕಾಲದ ಬಹುತ್ವ ಮಾದರಿಗೆಅನುಗುಣವಾಗಿ, ವರ್ತಮಾನದ ಅನೇಕ ಆಸಕ್ತಿಗಳನ್ನು ಸಮಸ್ಯೆಗಳನ್ನು ಸಾಹಿತ್ಯವುಕೂಡಾ, ತೆರೆದ ಕಣ್ಣುಗಳಿಂದ ಕಾಣುತ್ತಿದೆ. ಎಂಬ ಚಿಂತನಶೀಲತೆಯನ್ನು ಪ್ರಕಟಣೆ, ಅಧ್ಯಯನ, ಅಧ್ಯಾಪನಗಳೊಂದಿಗೆ ಹೊರಹಾಕುವುದೇ ಪ್ರಸಾರಾಂಗದ ಮುಖ್ಯಉದ್ದೇಶವಾಗಿದೆ.

ಪ್ರಸಾರಾಂಗವುಈವರೆಗೂ 47ಕನ್ನಡ ಪದವಿ ಪಠ್ಯಪುಸ್ತಕಗಳನ್ನು.08 ವಾರ್ಷಿಕ ವರದಿಗಳನ್ನು, 03 ಇತರೆ ಪುಸ್ತಕಗಳನ್ನು ಪ್ರಕಟಿಸಿದೆ.‘ವಿವಾಹ ಪೂರ್ವ ಕಾನೂನು ತಿಳಿವಳಿಕೆ’ ಎಂಬ ರಾಜ್ಯ ಮಟ್ಟದಕಾರ್ಯಗಾರಏರ್ಪಡಿಸುವ ಮೂಲಕ ಸಮಾಜಮುಖಿಚಿಂತನೆಯತ್ತ ಮುಖ ಮಾಡಿದೆ. “ಈ ವಾರ್ತಾಪತ್ರಿಕೆ”ಯನ್ನು ಹೊರತರುವ ಮೂಲಕ ವಿಶ್ವವಿದ್ಯಾಲಯದ ಶೈಕ್ಷಣಿಕ ಮಾಹಿತಿಯನ್ನು ಪ್ರಚಾರ ಮಾಡುವ ಹಾಗೂ ದಾಖಲೀಕರಣದಂತಹ ಭಿನ್ನಮಾದರಿಯ ಕಾರ್ಯಗಳಿಂದ ಅಭಿನಂದನೆಗೆಅರ್ಹವಾಗಿದೆ. ಈ ನಿಟ್ಟಿನಲ್ಲಿತನ್ನಕಾರ್ಯಕ್ಷಮತೆಯಕ್ಷಿತಿಜವನ್ನು ಇಮ್ಮಡಿಗೊಳಿಸಿದ ಪ್ರಸಾರಾಂಗವು, 11 ವಿಸ್ತರಣಾ ಮತ್ತು ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿದೆ.ಅದರಂತೆ ವಿಶ್ವವಿದ್ಯಾಲಯದಅವಶ್ಯಕ ಮಾಹಿತಿಗಳನ್ನು ಒಂದೆಡೆದಾಖಲಿಸುವ ಹಾಗೂ ಪ್ರಮುಖ ವಿಷಯಗಳನ್ನು, ಆಯೋಜಿತ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ‘ಇ’ ಪತ್ರಿಕೆಯನ್ನು ಹೊರತರುವ ಮುಖಾಂತರರಾಣಿಚನ್ನಮ್ಮ ವಿಶ್ವವಿದ್ಯಾಲಯದ ಹೆಮ್ಮೆಯ ಮುಖವಾಣಿಯಾಗುತ್ತೀರುವುದುಅತೀವ ಸಂತೋಷದ ಸಂಗತಿ.


ಪ್ರಸಾರಾಂಗದ ಮುಂದಿನ ಯೋಜನೆಗಳು :
1. ‘ಪ್ರಚಾರೋಪನ್ಯಾಸ ಮಾಲೆ’ ಯ ಸರಣಿಯನ್ನುರಾಣಿಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಮಹಾವಿದ್ಯಾಲಯಗಳು, ಸಂಶೋಧನಾಲಯಗಳು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಂಯುಕ್ತವಾಗಿಚಟುವಟಿಕೆಆರಂಭಿಸುವುದು.
2. ವಿಶ್ವವಿದ್ಯಾಲಯದ ಪ್ರಾತಿನಿಧಿಕಜರ್ನಲ್‍ಅನ್ನು ನಾಲ್ಕು ತಿಂಗಳಿಗೊಮ್ಮೆ ಪ್ರಕಟಿಸುವುದು. ಭಾಷೆ, ಮಾನವಿಕ ಹಾಗೂ ವಿಜ್ಞಾನ ವಿಷಯಗಳಿಗೆ ತಲಾಒಂದರಂತೆಒಟ್ಟು ಮೂರುಚತುರ್ಮಾಸ ಸಂಶೋಧನಾ ಪತ್ರಿಕೆ ಪ್ರಕಟಿಸುವುದು.
3. ವರ್ಷಕ್ಕೆಎರಡು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಹಾಗೂ ವಿಸ್ತರಣಾಉಪನ್ಯಾಸ ಮಾಲಿಕೆಯ ಉಪನ್ಯಾಸಗಳನ್ನು ಏರ್ಪಡಿಸುವುದು.
4. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಮುಖಾಂತರಅಗತ್ಯವಾದ ಶೀರ್ಷಿಕೆಗಳನ್ನು, ನೀಡಿ, ಗ್ರಂಥಗಳನ್ನು ಬರೆಸಿ ಪ್ರಕಟಿಸಲಾಗುವುದು.
5. 2018-19 ಮತ್ತು ನಂತರದ ಸಾಲಿನ ವಾರ್ಷಿಕ ವರದಿಯನ್ನುರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸಲಾಗುವುದು.
6. ಸ್ನಾತ್ತಕ ತರಗತಿಗಳಿಗೆ ಆವಶ್ಯಕ ಮತ್ತುಐಚ್ಛಿಕಕನ್ನಡ ಪದವಿ ಪಠ್ಯಪುಸ್ತಕಗಳನ್ನು ಮುದ್ರಣ ಮಾಡುವುದು.
7. ವಿಶ್ವವಿದ್ಯಾಲಯದಎಲ್ಲ ವಿಭಾಗಗಳ ಕೈಪಿಡಿಯನ್ನು ತಯಾರಿಸಿ ಮುದ್ರಣ ಮಾಡುವುದು.
8. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟಜಿಲ್ಲೆಯ ಕವಿಗಳ ಲೇಖನಗಳನ್ನು ಪ್ರಸಾರಾಂಗದಿಂದ ಪ್ರಕಟಿಸುವುದು.
9. ಸಂಶೋಧನಾ ಪತ್ರಿಕೆಯನ್ನು ಪ್ರಕಟಿಸುವುದು.
10. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಮುಖಾಂತರಅಗತ್ಯವಾದ ಶೀರ್ಷಿಕೆಗಳನ್ನು ನೀಡಿ, ಗ್ರಂಥಗಳನ್ನು ಬರೆಸಿ ಪ್ರಕಟಿಸಲಾಗುವುದು.
11. ಪ್ರಚಾರೋಪನ್ಯಾಸ ಮಾಲೆಗಳ ಲೇಖನಗಳನ್ನು ಪ್ರಕಟಿಸುವುದು.
12. ವಿಶ್ವವಿದ್ಯಾಲಯದದಶಮಾನೋತ್ಸವ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಪ್ರಕಟಿಸುವುದು.
13. ವಿಶ್ವವಿದ್ಯಾಲಯದದಶಮಾನೋತ್ಸವ ಪ್ರಯುಕ್ತ ವಿವಿಧ ವಿಭಾಗಗಳ ಏರ್ಪಡಿಸಿದ ವಿಚಾರಸಂಕಿರಣದಆಯ್ದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು.

ತ್ವರಿತ ಲಿಂಕ್ ಗಳು

LATEST INFORMATION

Click Here to submit updated basic information about your college.


Details of ICT Initiatives should impliment over all affiliated colleges of Rani Channamma University.


Meeting Proceedings of IT Initiatives and IT-Infrastructure.


Download annexure-I

Top