ಕುರಿತು:


         ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯು ಎಸ್. ಆರ್. ಕಂಠಿ ಸ್ನಾತಕೋತ್ತರ ಕೇಂದ್ರವನ್ನು ಎರಡು ಪ್ರಮುಖ ವಿಷಯಗಳಾದ “ಸಮಾಜಕಾರ್ಯ ಮತ್ತು ಅರ್ಥಶಾಸ್ತ್ರ” ವಿಭಾಗಗಳೊಂದಿಗೆ 2011ರಲ್ಲಿ ಆರಂಭಿಸಿತು. ಸತತ 9 ವರ್ಷಗಳಿಂದ ವಿದ್ಯಾರ್ಥಿ “ಸ್ನೇಹಿ ಹಾಗೂ ಶೈಕ್ಷಣಿಕ ಸಾಧಕರಿಗೆ” ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ನಾತಕೋತ್ತರ ಕೇಂದ್ರಕ್ಕೆ ಇದು ದಶಮಾನೋತ್ಸವ ವರ್ಷವಾಗಿದೆ. ಎಸ್. ಆರ್. ಕಂಠಿ ಸ್ನಾತಕೋತ್ತರ ಕೇಂದ್ರಕ್ಕೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ, ದಿವಂಗತ ಶ್ರೀ. ಎಸ್. ಆರ್. ಕಂಠಿ ಇವರ ಸ್ಮರಣಾರ್ಥವಾಗಿ ಈ ಹೆಸರನ್ನು ಇಡಲಾಗಿದೆ. ಈ ಸ್ನಾತಕೋತ್ತರ ಕೇಂದ್ರವು ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗಿದ್ದು ಬಾಗಲಕೋಟೆ ಜಿಲ್ಲೆಯ ಮತ್ತು ಇತರೆ ಜಿಲ್ಲೆಯ ಗ್ರಾಮಿಣ ಮತ್ತು ನಗರದ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತವಾಗಿದೆ. ಕಳೆದ 9 ವರ್ಷಗಳಿಂದ ಅಂದರೆ 2011 ರಿಂದ ಸ್ನಾತಕೋತ್ತರ ಕೇಂದ್ರವು ಅತ್ಯುತ್ಸಾಹದಿಂದ ಜ್ಞಾನದ ಸೃಷ್ಟಿ, ವಿದ್ಯಾರ್ಥಿ ಕಲ್ಯಾಣ, ಪಠ್ಯೇತರ ಚಟುವಟಿಕೆಗಳ ಉತ್ತೇಜನ, (ರಕ್ತದಾನ ಶಿಬಿರ, ಮಹಿಳಾ ಮತ್ತು ಸಾಮಾಜಿಕ ಅರಿವು ಶಿಬಿರಗಳು ಜಾಥಾಗಳು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳು, ಕಾರ್ಯಾಗಾರಗಳು) ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬರುತ್ತಿದೆ. ಸಮುದಾಯ ಅಭಿವೃದ್ದಿ ಕಾರ್ಯಕ್ರಮಗಳ ಉತ್ತೇಜನ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುತ್ತಾ ಬರುತ್ತಿದೆ. ಪ್ರಸ್ತುತ ನಮ್ಮ ಸ್ನಾತಕೋತ್ತರ ಕೇಂದ್ರವು ವಿದ್ಯಾರ್ಥಿ ಸ್ನೇಹಿಯಾಗಿದ್ದು, ಇದು ಕಲಿಕಾ ಮತ್ತು ಕೌಶಲ್ಯ ಅಭಿವೃದ್ಧಿ ಪರಕಾರ್ಯ ನಿರತವಾಗಿದೆ.

ವಿದ್ಯಾರ್ಥಿಗಳ ಜ್ಞಾನದ ಉತ್ತೇಜನ ಮತ್ತು ಹಸಿವು ನೀಗುವಲ್ಲಿ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿ “ಓದುಗ ಸ್ನೇಹಿ” ಪರಿಸರವಿದೆ. ಸ್ನಾತಕೋತ್ತರ ಕೇಂದ್ರದಲ್ಲಿ ಗ್ರಂಥಾಲಯದ ಸೌಲಭ್ಯವಿದ್ದು, ಸಾವಿರಕ್ಕೂ ಅಧಿಕ ಉತ್ತಮ ದರ್ಜೆಯ ಪರಾಮರ್ಶನ ಗ್ರಂಥಗಳು, ಮಾಸಿಕ ಪತ್ರಿಕೆಗಳು, ದಿನಪತ್ರಿಕೆಗಳು, ವಿದ್ಯಾರ್ಥಿ ಸಂಶೋಧನಾ ಪ್ರಬಂಧಗಳು ಇವೆ. ಸ್ನಾತಕೋತ್ತರ ಕೇಂದ್ರದಲ್ಲಿ ಅತ್ಯಂತ ದಕ್ಷ ಹಾಗೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ.

ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮ ಸ್ನಾತಕೋತ್ತರ ಕೇಂದ್ರವು ವಿದ್ಯಾರ್ಥಿಗಳ ಸಾಧನೆಯ ಗರಿಯನ್ನು ಮುಡಿಗೇರಿಸಿ ಕೊಂಡಿದೆ. ವಿದ್ಯಾರ್ಥಿಗಳ ಉತ್ತಮ ಪ್ರಗತಿ ಮತ್ತು ಭವಿಷ್ಯ ರೂಪಿಸಿಕೊಡುವ ಹಲವು ನಿದರ್ಶನಗಳೇ ಇದಕ್ಕೆ ಸಾಕ್ಷಿಕರಿಸಿವೆ. ನಮ್ಮ ಸ್ನಾತಕೋತ್ತರ ಕೇಂದ್ರದಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ “ದ್ವಿತೀಯ ಮತ್ತು ತೃತಿಯ” ರ್ಯಾಂಕ್‍ಗಳೊಂದಿಗೆ 04 ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಾಧನೆಗೈದಿದ್ದಾರೆ. ನೆಟ್/ಸ್ಲೆಟ್ ಪರೀಕ್ಷೆಗಳನ್ನು 13 ಜನ ತೇರ್ಗಡೆಗೊಂಡಿದ್ದಾರೆ ಮತ್ತು 09 ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ ಪದವಿಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಕಾರ್ಯನಿರತರಾಗಿದ್ದಾರೆ. ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ 06 ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಔದ್ಯೋಗಿಕ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕ್ಯಾಂಪಸ್ ಇಂಟರವ್ಯೂ, ಕೌಶಲ್ಯ ಅಭಿವೃದ್ಧಿಕಾರ್ಯಕ್ರಮ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ. ಬಹುತೇಕ ನಮ್ಮ ವಿದ್ಯಾರ್ಥಿಗಳು ಸರಕಾರಿ ಮತ್ತು ಸರಕಾರೇತರ ವಲಯಗಳಲ್ಲಿ ಉದ್ಯೋಗ ನಿರತರಾಗಿದ್ದಾರೆ.


Vision :


Rani Channamma University Belagavi will be an exemplar of academic excellence, aimed at to disseminate and advance knowledge in a globalizing world where convergence to create a new pool of world class man power for the well being of the society


Mission :


To impart innovative and quality education of global-standard, to produce skilled human power.
To foster educational programmes in various disciplines based on interaction with society and industry.
To review and design co-curricular activities to develop the overall personality of the students.
To strengthen professionalism with ethics to enable the students to face the challenges of contemporary society.



Top