• ವಿಭಾಗದ ಹೆಸರು: ಅರ್ಥಶಾಸ್ತ್ರ

  ಅರ್ಥಶಾಸ್ತ್ರ ವಿಭಾಗವು, ೧೯೮೨ ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದ ದಿನಾಂಕದಿಂದ ಮತ್ತು ೨೦೧೦ ರಲ್ಲಿ ಅಸ್ತಿತ್ವಕ್ಕೆ ಬಂದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಒಂದು ಪ್ರಮುಖ ವಿಭಾಗವಾಗಿ ಸುದೀರ್ಘ ಶೈಕ್ಷಣಿಕ ಸೇವೆಯನ್ನು ನೀಡುತ್ತಲಿದೆ. 

  ಉತ್ತರ ಕರ್ನಾಟಕ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ, ನಮ್ಮ ವಿಭಾಗವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ     ವಿದ್ಯಾಸಂಗಮ ಆವರಣ ಬೆಳಗಾವಿ, ಎಸ್. ಆರ್. ಕಂಠಿ ಸ್ನಾತಕೋತ್ತರ ಕೇಂದ್ರ, ಬಾಗಲಕೋಟೆ ಮತ್ತು ಜೆ.ಎಸ್. ಎಸ್ ಮಹಾವಿದ್ಯಾಲಯ, ಗೋಕಾಕ- ಹೀಗೆ ಮೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಭಾಗದ ಒಟ್ಟು ವಿದ್ಯಾರ್ಥಿಗಳ ಪ್ರವೇಶಾತಿ ೧೫೦. ಅರ್ಥಶಾಸ್ತ್ರ ಸ್ನಾತಕೋತ್ತರ ಕೋರ್ಸಿನಲ್ಲಿ, ಅರ್ಥಶಾಸ್ತ್ರದ ಮುಖ್ಯ ವಿಷಯಗಳ ಜೊತೆಗೆ ಗಣಿತಶಾಸ್ತ್ರ ಸಂಖ್ಯಾಶಾಸ್ತ್ರ, ಸಂಶೋಧನಾ ವಿಧಾನ, ಎಕಾನೊಮೆಟ್ರಿಕ್ಸ್, ಇತ್ಯಾದಿ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ನಾಲ್ಕನೇ ಸೆಮಿಸ್ಟರದಲ್ಲಿ ವೈಯಕ್ತಿಕ ಕಿರುಪ್ರಬಂಧವನ್ನು ಬರೆದು, ವಿಶ್ವವಿದ್ಯಾಲಯಕ್ಕೆ ಮೌಲ್ಯಮಾಪನಕ್ಕಾಗಿ ಸಲ್ಲಿಸುವುದು ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ.

  ನಮ್ಮ ವಿಭಾಗದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಅರ್ಹತಾ ಪರೀಕ್ಷೆಗಳ (ನೆಟ್/ಸ್ಲೇಟ್) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರಿಂದ ಪ್ರಯೋಜನ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಕರ್ನಾಟಕದ ಒಳಗೆ ಮತ್ತು ಹೊರಗೆ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ವಿಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಅರ್ಥಶಾಸ್ತ್ರ ವಿಭಾಗದಲ್ಲಿ ಒಟ್ಟು ಮೂರು ಪ್ರಾಧ್ಯಾಪಕರು ಮತ್ತು ಇಬ್ಬರು ಸಹಾಯಕ ಪ್ರಾಧ್ಯಾಪಕರು ಬೋಧನಾ ಕಾರ್ಯದಲ್ಲಿ ತೊಡಗಿದ್ದಾರೆ ಇವರೆಲ್ಲರೂ ಸಂಶೋಧನಾ ಮಾರ್ಗದರ್ಶಕರಾಗಿದ್ದು ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುತ್ತಾರೆ ಇವರೆಲ್ಲರ ಮಾರ್ಗದರ್ಶನದಲ್ಲಿ ಸುಮಾರು ೫೦ ಸಂಶೋಧನಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಶೋಧನಾ ಅಧ್ಯಯನವನ್ನು ಮುಂದುವರೆಸುತ್ತಿದ್ದಾರೆ.

 • ಬೋಧಕ ಸಿಬ್ಬಂದಿ

  ಕ್ರಮ ಸಂಖ್ಯೆ.ಬೋದಕ ಸಿಬ್ಬಂದಿಯ ಹೆಸರುಭಾವಚಿತ್ರವಿದ್ಯಾರ್ಹತೆಹುದ್ದೆಇಮೇಲ್
  01 ಪ್ರೊ. (ಶ್ರೀಮತಿ.) ಮುಕ್ತಾ ಎಸ್. ಆಡಿ ಎಂ.ಎ., ಪಿಎಚ್.ಡಿ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು

  muktasadi@gmail.com

  02 ಪ್ರೊ. ತಳವಾರ ಸಾಬಣ್ಣ ಎಂ.ಎ., ಪಿಎಚ್.ಡಿ ಪ್ರಾಧ್ಯಾಪಕರು

  sabannatalwars@rediffmail.com

  03 ಪ್ರೊ. ಡಿ.ಎನ್. ಪಾಟೀಲ ಎಂ.ಎ., ಎಲ್.ಎಲ್.ಬಿಪಿಎಚ್.ಡಿ ಪ್ರಾಧ್ಯಾಪಕರು

  dr.dnpatil@rediffmail.com

  04 ಡಾ. ಹುಚ್ಚೇಗೌಡ ಎಂ.ಎ., ಪಿಎಚ್.ಡಿ ಸಹಾಯಕ ಪ್ರಾಧ್ಯಾಪಕರು

  hgowda_smtd@rediffmail.com

  05 ಡಾ. ಕಿರಣಕುಮಾರ ಪಿ. ಎಂ.ಎ., ಪಿಎಚ್.ಡಿ ಸಹಾಯಕ ಪ್ರಾಧ್ಯಾಪಕರು

   

 • ಸಂಶೋಧನೆ:

  S.Noಬೋಧಕ ಸಿಬ್ಬಂದಿಯ ಹೆಸರುಸಂಶೋಧನೆ ವಿವರ
  01 ಪ್ರೊ. (ಶ್ರೀಮತಿ.) ಮುಕ್ತಾ ಎಸ್. ಆಡಿ ಪ್ರಿಪರೇಶನ್ ಆಫ್ "ಬೆಳಗಾಂವ ಡಿಸ್ಟ್ರಿಕ್ಟ್ ಹ್ಯೂಮನ್ ಡೆವಲಪ್ ಮೆಂಟ್ ರಿಪೋರ್ಟ್ ೨೦೧೩"
  02 ಪ್ರೊ. ತಳವಾರ ಸಾಬಣ್ಣ “ಮೈಗ್ರೇಶನ್ ಆಂಡ್ ರಿಮಿಟನ್ಸ್ ಸ್: ಎ ಕೇಸ್ ಸ್ಟಡಿ ಆಫ್ ಸೋಷಿಯೋ-ಎಕನಾಮಿಕ್ ಡೆವಲಪ್ ಮೆಂಟ್ ಇನ್ ಹೈದರಾಬಾದ ಕ್ರನಾಟಕ ರಿಜನ್”
  03 ಡಾ. ಹುಚ್ಚೇಗೌಡ ಪ್ರಿಪರೇಶನ್ ಆಫ್ "ಬೆಳಗಾಂವ ಡಿಸ್ಟ್ರಿಕ್ಟ್ ಹ್ಯೂಮನ್ ಡೆವಲಪ್ ಮೆಂಟ್ ರಿಪೋರ್ಟ್ ೨೦೧೩"
 • ವಿಭಾಗೀಯ ಚಟುವಟಿಕೆಗಳು:

  ಸೆಮಿನಾರ್ವರ್ಷ
  ಎರಡು ದಿನಗಳ ರಾಷ್ಟ್ರೀಯ ಸೆಮಿನಾರ್ "21 ನೇ ಶತಮಾನದ ಅವಧಿಯಲ್ಲಿ ಮಹಿಳಾ ಸಬಲೀಕರಣ", . 22 ನೇ ನವೆಂಬರ್ 2013
  ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ "ಭಾರತೀಯ ಕೃಷಿಯಲ್ಲಿ ಪ್ರಸ್ತುತ ಬಿಕ್ಕಟ್ಟು: ಸಮಸ್ಯೆಗಳು ಮತ್ತು ಸವಾಲುಗಳು," 30-31 ಅಕ್ಟೋಬರ್2014
  "ಜೀವವೈವಿಧ್ಯ ಸಂರಕ್ಷಣೆಯ" ಬಗ್ಗೆ ಒಂದು ದಿನದ ಜಾಗೃತಿ ಕಾರ್ಯಕ್ರಮ ಫೆಬ್ರವರಿ 3, 2015
  "ಯುವಜನತೆ ಮತ್ತು ಸಹಕಾರ" ವಿಷಯದ ಎರಡು ದಿನಗಳ ಸಂವಾದ ಕಾರ್ಯಕ್ರಮ, ಫೆಬ್ರವರಿ 23-24, 2015
  "ಸುಸ್ಥಿರ ಗ್ರಾಮೀಣಾಭಿವೃದ್ಧಿ: ಭಾರತದಲ್ಲಿ ಸವಾಲುಗಳು ಮತ್ತು ಅವಕಾಶಗಳು" ರಾಷ್ಟ್ರೀಯ ವಿಚಾರ ಸಂಕಿರಣ ಫೆಬ್ರವರಿ 27-28, 2015
  ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ "ಡ್ರೈ ಲ್ಯಾಂಡ್ ಅಗ್ರಿಕಲ್ಚರ್ ಟು ಓವರಕಮ್ ಕ್ರೈಸಿಸ್ : ಪ್ರಾಬ್ಲಮ್ಸ್ ಆಂಡ್ ಪ್ರಾಸ್ಪೆಕ್ಟ್ಸ್ 26-27 ನೇ ನವೆಂಬರ್ 2015
  "ಕರ್ನಾಟಕ ರಾಜ್ಯದ ಕೃಷಿ ವ್ಯಾಪಾರ" ಕುರಿತು ಎರಡು ದಿನಗಳ ರಾಷ್ಟ್ರೀಯ ಸೆಮಿನಾರ್ 8-9 ನೇ ಡಿಸೆಂಬರ್ 2016
  ಎರಡು ದಿನಗಳ ರಾಷ್ಟ್ರೀಯ ಸೆಮಿನಾರ್ "ಭಾರತದಲ್ಲಿ ಅಂತರ್ಗತ ವ್ಯವಸಾಯ ಬೆಳವಣಿಗೆ: ಸಮಸ್ಯೆಗಳು ಮತ್ತು ಸವಾಲುಗಳು" 16-17 ಫೆಬ್ರವರಿ 2017

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in