• ವಿಭಾಗದ ವಿವರ

  • ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯು ಉನ್ನತ ಶಿಕ್ಷಣದ ಹಲವಾರು ಅನ್ವಯಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಉತೃಷ್ಠ ಮಟ್ಟದ ಅದ್ಯಯನ ಕೇಂದ್ರಗಳನ್ನು ಕಲ್ಪಿಸಿಕೊಡಲು ಮಹತ್ತರ ಯೋಜನೆಗಳನ್ನು ಹಮ್ಮಿಕೊಂಡಿದೆ.  ಇಂತಹ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಸ್ಥಾಪನೆಯು ಒಂದಾಗಿದ್ದು, ಇದು ಪ್ರಸ್ತುತ ಅಪರಾಧ ಸಮಸ್ಯೆಗಳನ್ನು ಹಾಗೂ ಅವುಗಳ ಅದ್ಯಯನ ಹಾಗೂ ಅವುಗಳ ವಿರುದ್ದ ಹೋರಾಡಲು ವಿದ್ಯಾರ್ಥಿಗಳಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ನೀಡಿ ಪರಿಣಿತರನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ.
  • ಸ್ಕೂಲ್ ಆಪ್ ಕ್ರಿಮಿನಾಲಜಿ ಆಂಡ್ ಕ್ರಿಮಿನಲ್ ಜಸ್ಟಿಸ್ ಇಡೀ ದೇಶದಲ್ಲಿಯೇ ಒಂದು ಅನನ್ಯ ಕೋರ್ಸ ಆಗಿದ್ದು ಇದು ಐದು ವರ್ಷಗಳ ಅದ್ಯಯನ ವಿಷಯವಾಗಿದೆ. ಪಿಯುಸಿ ಅಥವಾ ತತ್ಸಮಾನ ವರ್ಗದಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳು ಸೇರಲು ಅರ್ಹರಾಗಿರುತ್ತಾರೆ, ಸ್ಕೂಲ್ ಆಪ್ ಕ್ರಿಮಿನಾಲಜಿ ಆಂಡ್ ಕ್ರಿಮಿನಲ್ ಜಸ್ಟಿಸ್‍ನಲ್ಲಿ ಪದವಿ ಮಟ್ಟದಲ್ಲಿ ಕೆಲವು ಆಯೆಯ್ಕ (ವಿಶೇಷ) ವಿಷಯಗಳನ್ನು ಒಳಗೊಂಡಂತೆ 24 ವಿಷಯಗಳನ್ನು 3 ವರ್ಷಗಳಲ್ಲಿ ಕಲಿಸಲಾಗುತ್ತದೆ. ಆದರೆ ಬೇರೆ ವಿಶ್ವವಿದ್ಯಾಲಯಗಳ ಕ್ರಿಮಿನಾಲಜಿ ಪದವಿ ಕೋರ್ಸಗಳಲ್ಲಿ ಕೇವಲ 8 ವಿಷಯಗಳನ್ನು ಬೋದಿಸಲಾಗುತ್ತದೆ (ಪ್ರತಿ ಸೆಮೆಸ್ಟರನಲ್ಲಿ ಒಂದು ವಿಷಯದಂತೆ). ಆದ್ದರಿಂದ ಇದೊಂದು ಇಡೀ ದೇಶದಲ್ಲಿಯೇ ಬಿನ್ನವಾದ ರೀತಿಯ ಅದ್ಯಯನ ವಿಷಯವಾಗಿದೆ. 
  • ಸ್ನಾತಕೋತ್ತರ ಮಟ್ಟದಲ್ಲಿ (24+24+28+28= 104 ಕ್ರೆಡಿಟ್) ಒಟ್ಟಾರೆಯಾಗಿ 50 ವಿಷಯಗಳನ್ನು ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದಲ್ಲಿ ಬೋದಿಸಲಾಗುತ್ತದೆ.
  • ಇದು ಪೋಲಿಸ್, ಖಾಸಗಿ ಪತ್ತೇದಾರಿ, ಸುಧಾರಣಾ ಆಡಳಿತ ಅಂಗಸಂಸ್ಥೆಗಳು, ನ್ಯಾಯವಿಜ್ಞಾನ, ಬಾಲಾಪರಾಧ ಸಂಸ್ಥೆಗಳು ಮತ್ತು ಖಾಸಗಿ ಭದ್ರತೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಪರೀಣಿತರನ್ನಾಗಿಸುವ ವೃತ್ತಿಪರ ಕೋರ್ಸು ಇದಾಗಿದೆ.
  • ಇದರ ಇನ್ನೊಂದು ವಿಶೇಷವೆಂದರೆ, ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳು ಅಪರಾಧ ನ್ಯಾಯಾಂಗ ವ್ಯವಸ್ಥೆಯ ಅಂಗ ಸಂಸ್ಥೆಗಳ ಕ್ಷೇತ್ರ ಅದ್ಯಯನದಲ್ಲಿ ತೊಡಗಿಸಲಾಗುತ್ತದೆ. ಸಂಶೋಧನೆ, ಸಂಖ್ಯಾಶಾಸ್ತ್ರ, ಗಣಕಯಂತ್ರ ಬಳಕೆ ಜ್ಞಾನ ಹೊಂದಿರಬೇಕು. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಂಶೋದನಾ ಪ್ರಭಂದಗಳು ಕಡ್ಡಾಯವಾಗಿರುತ್ತದೆ.

  ವಿಭಾಗದ ದ್ಯೇಯೋದ್ಯೇಶಗಳು 

  ವಿಭಾಗದ ನೋಟ (ವಿಷನ್) :

  ಸ್ಕೂಲ್ ಆಪ್ ಕ್ರಿಮಿನಾಲಜಿ ಆಂಡ್ ಕ್ರಿಮಿನಲ್ ಜಸ್ಟಿಸ್, ಅಪರಾಧ ನ್ಯಾಯಾಂಗ ವ್ಯವಸ್ಥೆಯ ವಿವಿದ ಕ್ಷೇತ್ರಗಳಲ್ಲಿ ಪರಿಣಿತ ಭೋಧನೆ ಮಾಡಿ ವಿದ್ಯಾರ್ಥಿಗಳಿಗೆ ಅಪರಾಧ ಸಮಸ್ಯಗಳು ಹಾಗೂ ಅವುಗಳ ವಿರುದ್ದ ಹೊರಾಡುವ ಪರಿಣಿತತೆ ಹಾಗೂ ಪೋಲಿಸ್ ಇಲಾಖೆ, ಖಾಸಗಿ ಪತ್ತೇದಾರಿ, ಬಾಲಾಪರಾಧಿತನ ಸುಧಾರಣೆ. ನ್ಯಾಯ ವಿಜ್ಞಾನದ ಹಲವು ಕ್ಷೇತ್ರಗಳು ಹಾಗೂ ತರಬೇತಿ, ಸಲಹೆ, ಸಂಶೋಧನೆಗಳಲ್ಲಿ ಪರಿಣಿತರನ್ನಾಗಿಸುವ ಅಲ್ಲದೇ, ಸಾರ್ವಜನಿಕರಿಗೆ ಕಾನೂನು ಸಲಹೆ ನೀಡಿ, ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ.

  ದ್ಯೇಯ (ಮಿಷನ್) 

  ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಹಲವು ಸಂಬಂದಿಸಿದ ವಿಷಯಗಳಾದ ಶಿಕ್ಷಾ ಶಾಸ್ತ್ರ, ಸುಧಾರಣಾ ಆಡಳಿತ, ಬಲಿಪಶು ಶಾಸ್ತ್ರ, ಪೋಲಿಸ್ ಆಡಳಿತ, ಪೋಲಿಸ್ ವಿಜ್ಞಾನ, ಅಪರಾಧ ಕಾನೂನುಗಳು ಹಾಗೂ ಅಪರಾಧ ಶಾಸ್ತ್ರದ ಸಂಶೋಧನೆ ಹಾಗೂ ತರಬೇತಿ ಈ ವಿಷಯಗಳಲ್ಲಿ ಯುವ ಪಿಳೀಗೆಯನ್ನು ಒಬ್ಬ ವೃತ್ತಿಪರ, ಪರಿಣಿತರನ್ನಾಗಿ ರೂಪಿಸುವುದು ಇದರ ದ್ಯೇಯವಾಗಿರುತ್ತದೆ. 

  ಉದ್ದೇಶಗಳು:

  1. ಪರಾಧ ಶಾಸ್ತ್ರ ಹಾಗೂ ಸಂಬಂಧಿಸಿದ ವಿಷಯಗಳಲ್ಲಿ ಕೌಶಲ್ಯತೆ, ಬೋಧನೆ, ಸಲಹೆ ಹಾಗೂ ಸಂಶೋಧನೆಗಳನ್ನು ಹಮ್ಮಿಕೊಳ್ಳುವುದು.
  2. ವಿದಿವಿಜ್ಞಾನ, ಪೋಲಿಸ್ ವಿಜ್ಞಾನ, ಪಿಂಗರ್ ಪ್ರಿಂಟ್, ಪುಟ್ ಪ್ರಿಂಟ್, ಲಿಪ್ ಪ್ರಿಂಟ್, ಕೊಷನಡ್ ಡಾಕ್ಯೂಮೆಂಟ್ (ಪ್ರಶ್ನಾತೀತ ದಸ್ತವೇಜು), ನಕಲು ಸಹಿ, ಕೇಶ, ಪೈಬರ್, ರಕ್ತ ಪರೀಕ್ಷೆ, ಎಲುಬುಗಳ ಪರೀಕ್ಷೆ ಹಾಗೂ ಅಪರಾಧ ಜರುಗಿದ ದೃಶ್ಯವನ್ನು ಇವೆಲ್ಲವುಗಳ ಮೇಲೆ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುವುದು.
  3. ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ಜ್ಞಾನದಿಂದ ಯುವ ಪೀಳಿಗೆಯನ್ನು ವೃತ್ತಿಪರರನ್ನಾಗಿಸಿ ಕಾನೂನು ಹಾಗೂ ನ್ಯಾಯದ ಬಗ್ಗೆ ಅರಿವು ಮೂಡಿಸುವುದು.
  4. ತರಾಷ್ಟ್ರೀಯ ಕಾನೂನುಗಳು ಹಾಗೂ ಬಾರತದ ಸಂವಿದಾನದಲ್ಲಿ ಉಲ್ಲೇಖಿಸುವಂತೆ ಮಾನವ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಪ್ರಚಾರಪಡಿಸುವುದು ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು.
  5. ಸಮಾಜದಲ್ಲಿ ಕಾನೂನು ಪರಿಪಾಲನೆಯಿಂದ ಶಾಂತಿ ಸುವ್ಯವಸ್ಥೆಯನ್ನು ಹಾಗೂ ಸ್ವಾಸ್ಥ್ಯವನ್ನು ಎತ್ತಿ ಹಿಡಿವುದು.
  6. ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯದ ಸಂಶೋಧನಾ ಕಾರ್ಯದಲ್ಲಿ ಸೂಕ್ತ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶಣ ನೀಡುವುದು ಹಾಗೂ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ತೊಡಗಿಸಿ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವುದು.

  ¸ÀÆ̯ï D¥ï Qæ«Ä£Á®f DAqï Qæ«Ä£À¯ï d¹Ö¸ï Erà zÉñÀzÀ°èAiÉÄà MAzÀÄ C£À£Àå PÉÆøÀð DVzÀÄÝ EzÀÄ LzÀÄ ªÀµÀðUÀ¼À CzÀåAiÀÄ£À «µÀAiÀĪÁVzÉ. ¦AiÀÄĹ CxÀªÁ vÀvÀìªÀiÁ£À ªÀUÀðzÀ°è vÉUÀðqÉAiÀiÁzÀ «zÁåyðUÀ¼ÀÄ ¸ÉÃgÀ®Ä CºÀðgÁVgÀÄvÁÛgÉ, ¸ÀÆ̯ï D¥ï Qæ«Ä£Á®f DAqï Qæ«Ä£À¯ï d¹Ö¸ï£À°è ¥ÀzÀ« ªÀÄlÖzÀ°è PÉ®ªÀÅ DAiÉÄAiÀÄÌ («±ÉõÀ) «µÀAiÀÄUÀ¼À£ÀÄß M¼ÀUÉÆAqÀAvÉ 24 «µÀAiÀÄUÀ¼À£ÀÄß 3 ªÀµÀðUÀ¼À°è PÀ°¸À¯ÁUÀÄvÀÛzÉ. DzÀgÉ ¨ÉÃgÉ «±Àé«zÁå®AiÀÄUÀ¼À Qæ«Ä£Á®f ¥ÀzÀ« PÉÆøÀðUÀ¼À°è PÉêÀ® 8 «µÀAiÀÄUÀ¼À£ÀÄß ¨ÉÆâ¸À¯ÁUÀÄvÀÛzÉ (¥Àæw ¸ÉªÉĸÀÖgÀ£À°è MAzÀÄ «µÀAiÀÄzÀAvÉ). DzÀÝjAzÀ EzÉÆAzÀÄ Erà zÉñÀzÀ°èAiÉÄà ©£ÀߪÁzÀ jÃwAiÀÄ CzÀåAiÀÄ£À «µÀAiÀĪÁVzÉ.

 • ಪ್ರಾಧ್ಯಾಪಕರ ವಿವರ 

  ಅ ನಂ.ಪ್ರಾಧ್ಯಾಪಕರ ಹೆಸರು ಮತ್ತು ಇಮೇಲ್ ವಿಳಾಸ  ಪ್ರಾಧ್ಯಾಪಕರ ಛಾಯಚಿತ್ರ  ವಿದ್ಯಾರ್ಹತೆಪಧನಾಮ
  01 ಪ್ರೊ. ಆರ್ ಎನ್. ಮನಗೂಳಿ.
  drmangoli.rn@gmail.com
  ಎಮ್ ಎ, ಸ್ಲೆಟ್, ಪಿ.ಹೆಚ್‍ಡಿ ಪ್ರಾಧ್ಯಾಪಕರು,ನಿರ್ಧೇಶಕರು & ಅದ್ಯಕ್ಷರು 
  02 ಡಾ. ನಂದಿನಿ ಜಿ. ದೇವರಮನಿ 
  ngdevarmani@yahoo.co.in
  ಎಮ್ ಎ, ಸ್ಲೆಟ್, ಪಿ.ಹೆಚ್‍ಡಿ ಸಹಾಯಕ ಪ್ರಾಧ್ಯಾಪಕರು
  03 ಶ್ರೀ. ಚಂದ್ರಶೇಖರ ಎಸ್. ವ್ಹಿ
  chandusv24@gmail.com
   ಎಮ್ ಎ, ನೆಟ್ ಸಹಾಯಕ ಪ್ರಾಧ್ಯಾಪಕರು
  04   ಡಾ. ಮಹೇಶ್ವರಿ ಎಸ್ ಕಾಚಾಪೂರ
  kmaheshwari82@gmail.com
  ಎಮ್ ಎಸ್ ಡಬ್ಲೂ, ನೆಟ್, ಎಮ್‍ಪಿಲ್, ಪಿ.ಹೆಚ್‍ಡಿ ಸಹಾಯಕ ಪ್ರಾಧ್ಯಾಪಕರು

   

  ¥ÁæzsÁå¥ÀPÀgÀ bÁAiÀÄavÀæ
 • ಸಂಶೋಧನಾ ಯೋಜನೆಗಳು, ತರಬೇತಿ ಹಾಗೂ ಸಲಹೆ:

  ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗವು ಅನೇಕ ಸಂಶೋಧನಾ ಯೋಜನೆಗಳನ್ನು, ಕ್ಷೇತ್ರ ಅದ್ಯಯನಗಳನ್ನು, ವಿವಿದ ಇಲಾಖೆಗಳಾದ ಪೋಲಿಸ್ ಸಂಶೋಧನಾ ಮತ್ತು ಅಭಿವೃದ್ದಿ ಕಛೇರಿ, ಪೋಲಿಸ್ ಇಲಾಖೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ,

  ಕಾನೂನು ಸೇವಾ ಪ್ರತಿಸಿಧಿಗಳು, ರಾಜ್ಯ ಮಾನವ ಹಕ್ಕುಗಳ ಆಯೋಗ, ಯುಜಿಸಿ, ಐಸಿಎಸ್‍ಎಸ್‍ಆರ್ ಗಳ ಧನ ಸಹಾಯದ ಮೂಲಕ ನಿರ್ವಹಿಸುತ್ತದೆ.

   

 • ವಿಭಾಗದ ಚಟುವಟಿಕೆಗಳು:

  ವಿಭಾಗವು ಕಾಲಕಾಲಕ್ಕೆ ಸೆಮಿನಾರಗಳು, ಸಮ್ಮೇಳನಗಳು ಹಾಗೂ ಕಾರ್ಯಾಗಾರಗಳನ್ನು ಪ್ರಸ್ತುತ ಸಮಾಜ ಸಮಸ್ಯೆಗಳಿಗೆ ಅನುಗುನವಾಗಿ ಆಯೋಜಿಸುವುದು, ಪತ್ರಿಕೆಗಳಲ್ಲಿ ಪ್ರಕಟಿಸುವುದು ಹಾಗೂ ಅಲ್ಪ ಅವದಿಯ ತರಬೇತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ಇದಲ್ಲದೇ

  ವಿಭಾಗವು ಸಮೀಪದ ಗ್ರಾಮಗಳಲ್ಲಿ ಅನೇಕ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳಂತ ಇತರ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

  ದಿನಾಂಕ : 24.11.2016 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಅಪರಾಧ ಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗ ಮತ್ತು ದಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. (Memorandum of Agreement)

   

    

   

    

     

   

   

  1.      «¨sÁUÀªÀÅ PÁ®PÁ®PÉÌ ¸É«Ä£ÁgÀUÀ¼ÀÄ, ¸ÀªÉÄäüÀ£ÀUÀ¼ÀÄ ºÁUÀÆ PÁAiÀiÁðUÁgÀUÀ¼À£ÀÄß ¥Àæ¸ÀÄÛvÀ ¸ÀªÀiÁd ¸ÀªÀĸÉåUÀ½UÉ C£ÀÄUÀÄ£ÀªÁV DAiÉÆÃf¸ÀĪÀÅzÀÄ, ¥ÀwæPÉUÀ¼À°è ¥ÀæPÀn¸ÀĪÀÅzÀÄ ºÁUÀÆ C®à CªÀ¢AiÀÄ vÀgÀ¨ÉÃw PÁAiÀÄðPÀæªÀÄUÀ¼À£ÀÄß ¤ªÀð»¸ÀÄvÀÛzÉ. EzÀ®èzÉà «¨sÁUÀªÀÅ ¸À«ÄÃ¥ÀzÀ UÁæªÀÄUÀ¼À°è C£ÉÃPÀ PÁ£ÀÆ£ÀÄ CjªÀÅ ªÀÄÆr¸ÀĪÀ PÁAiÀÄðPÀæªÀÄUÀ¼ÀAvÀ EvÀgÀ ¥ÀoÉåÃvÀgÀ ZÀlĪÀnPÉUÀ¼À£ÀÄß ºÀ«ÄäPÉƼÀî¯ÁUÀÄvÀÛzÉ.

ಸಂಪರ್ಕಕ್ಕಾಗಿ

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ,
ವಿದ್ಯಾ ಸಂಗಮ,
ಪಿ ಬಿ ಆರ್ ಆರ್ ಎಚ್ - 4,
ಬೆಳಗಾವಿ - 591156

www.rcub.ac.in