Dr. B. R. AMBEDKAR STUDY CHAIR

ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಪೀಠ:
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠವನ್ನು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನವೆಂಬರ್ 2017 ರಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆರ್ಥಿಕ ಸಹಾಯದಿಂದ ಸ್ಥಾಪಿಸಲಾಯಿತು. ರೂ 200 ಲಕ್ಷಗಳನ್ನು ಸರ್ಕಾರ ಇಡಿಗಂಟಾಗಿ ಅಧ್ಯಯನ ಪೀಠಕ್ಕೇ ನೀಡಿದೆ. ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಂಶೋಧಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅವರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕøತಿಕ ಮತ್ತು ಆರ್ಥಿಕ ಚಿಂತನೆಗಳ ಸಂಶೋಧನೆ ಮತ್ತು ಅಧ್ಯಯನಗಳನ್ನು ಉತ್ತೇಜಿಸುವುದು ಅಧ್ಯಯನ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಸಮಾಜದಲ್ಲಿ ಅವರ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಲು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಧನೆಯÀನ್ನು ವೈಜ್ಞಾನಿಕವಾಗಿ ಮತ್ತು ವಸ್ತು ನಿಷ್ಠವಾಗಿ ಅಧ್ಯಯನ ಮಾಡುವುದು ಕೇಂದ್ರದ ಮುಖ್ಯ ಗುರಿಯಾಗಿದೆ.
ಪರಿಚಯ:

ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರು ವಿಶ್ವದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು, ಅವರ ಜೀವನದ ಗುರಿ, ದೃಷ್ಟಿ ಮತ್ತು ತತ್ಜಜ್ಞಾನ ಜಗತ್ತಿನ ಜನರ ಮೇಲೆ ಪ್ರಭಾವ ಬೀರಿದೆ. ಅವರು ಮಹಾ ಮಾನವತಾವಾದಿಯ ಆಗಿದ್ದರು. ಜೊತೆಗೆ ಭಾರತೀಯ ಶ್ರೇಷ್ಠ ಚಿಂತಕ, ರಾಜಕೀಯ ನಾಯಕ, ಇತಿಹಾಸಕಾರ, ಮಾನವಶಾಸ್ತ್ರಜ್ಞ ಸಮರ್ಥ ಬರಹಗಾರ, ಅರ್ಥಶಾಸ್ತ್ರಜ್ಞ, ಘನವಿದ್ವಾಂಸರು, ಸಂಪಾದಕರು, ಪುಸ್ತಕ ಪ್ರೇಮಿ, ಆಡಳಿತಗಾರರು, ಸಾಮಾಜಿಕ ಸುಧರಕರು, ಶಿಕ್ಷಣ ತಜ್ಞರು ಹಾಗೂ ಕಾನೂನು ನಿರ್ಮಾತ್ರರು ಮತ್ತು ದೂರದೃಷ್ಟಿ ಉಳ್ಳವರಾಗಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತೀಯ ಸಂವಿಧಾನದ ಶಿಲ್ಪಿ. 21 ನೇ ಶತಮಾನದಲ್ಲಿಯು ಅವರ ಚಿಂತನೆಗಳು ಪ್ರಸ್ತುತವಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಸಮಾನತೆ ಮತ್ತು ಮಾನವೀಯ ತತ್ವಗಳಿಂದ ಭಾರತೀಯ ಸಮಾಜವನ್ನು ಪುನ ರಚನೆಯನ್ನು ಮಾಡಲು ಹೊರಾಡಿದರು. ಇವೆಲ್ಲವುಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಮತ್ತು ಅವರನ್ನು ಅಂಬೇಡ್ಕರರ ಓದು, ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ತೋಡಗಿಕೊಳ್ಳುವಂತೆ ಪ್ರೇರೆಪಿಸುವಲ್ಲಿ ಅಧ್ಯಯನ ಪೀಠವು ಪ್ರಯತ್ನಿಸುತ್ತಿದೆ.
ಉದ್ದೇಶ :
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಪೀಠದ ಅಡಿಯಲ್ಲಿ ‘ಅಂಬೇಡ್ಕರ ಅಧ್ಯಯನ ಸ್ನಾತಕೋತ್ತರ ಡಿಪ್ಲೂಮಾ’ ಪದವಿಯನ್ನು ನೀಡುತ್ತಾ ಬಂದಿದ್ದೇವೆ. ವಿದ್ವಾಂಸರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ವಿವಿಧ ವೇದಿಕೆಗಳನ್ನು ನೀಡುವ ಮತ್ತು ಸಾಮಾನ್ಯ ವೇದಿಕೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಉದ್ಯೋಗ, ಬಡತನ, ಆರೋಗ್ಯ, ಕೈಗಾರಿಕೆ, ಕೃಷಿ, ಶಿಕ್ಷಣ ಮತ್ತು ಸಾಮಾಜಿಕನ್ಯಾಯಗಳಲ್ಲಿ ಸಮಗ್ರ ಅಭಿವೃದ್ಧಿಯ ವಿಷಯಗಳನ್ನು ಬೋಧಿಸುವ ಜೊತೆಗೆ ಪ್ರಸರಣವನ್ನು ಮಾಡುತ್ತಿದೆ. ಈ ಮೂಲಕ ನ್ಯಾಯಯುತ ಸಮಾಜವನ್ನು ನಿರ್ಮಿಸುವ ನೆಲೆಯಿಂದ ರಾಷ್ಟ್ರ ಕಟ್ಟುವ ಕಾಯಕವನ್ನು ನಿರ್ವಹಿಸುತ್ತಾ ಬಂದಿದೆ. ಅಂಬೇಡ್ಕರರ ಚಿಂತನೆಗಳನ್ನು ಸಮಾಜದ ಎಲ್ಲರಿಗೂ ತಲುಪಿಸುವ, ಅವರ ಹೋರಾಟದ ಬದುಕನ್ನು ಅರ್ಥೈಸುವ ಮೂಲಕ ಅಧ್ಯಯನ ಪೀಠವು ಸದಾಕಾಲ ಕ್ರಿಯಾಶೀಲ ಕಾರ್ಯನಿರ್ವಹಿಸುವ ಸದುದ್ದೇಶವನ್ನು ಹೊಂದಿದೆ.


Top