Dr. Pooja Haliyal

Director (I/C)


Dr. Sachindra G. R.

Assistant Director

ಪ್ರಸಾರಾಂಗದ ಕುರಿತು
ಸಾಹಿತ್ಯ ನಿಂತ ನೀರಲ್ಲ. ಅದು ಅವ್ಯಾಹತವಾಗಿ ಹರಿಯುತ್ತಿರುವ ಜೀವಂತ ಪ್ರವಾಹ ಹೀಗಾಗಿ ಬದಲಾಗುತ್ತಿರುವ ಹೊಸ ಸಂವೇದನೆಗಳನ್ನು ಅಧ್ಯಯಿನಿಸುವ ತುರ್ತು ಅಗತ್ಯ ನಮ್ಮ ವಿದ್ಯಾರ್ಥಿಗಳ ಮುಂದಿದೆ. ಸಾಹಿತ್ಯದ ಚಿಂತನ ಕ್ರಮ ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ಹಲವು ಕುತೂಹಲಗಳ ಮೂಲಕ ಸಮಸ್ಯೆಗಳೆಡೆಗೆ ಪ್ರವಹಿಸುವ ಚಿಂತನಶೀಲತೆ ಇಂದು ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಪೂರಕವಾಗಿ ಸಂಕಲ್ಪ ಬದ್ಧವಾದ ಹಾಗೂ ದೃಢವಾದ ಬದಲಾವಣೆಗಳನ್ನು ಅಳವಡಿಸಿಕೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗವು ದಿಟ್ಟ ಹೊಸ ಹೆಜ್ಜೆಗಳನ್ನಿಟ್ಟಿದೆ. ವಿದ್ಯಾರ್ಥಿಗಳ ಸಕ್ರಿಯ ಹಾಗೂ ಗಟ್ಟಿಯಾದ ಚಿಂತನ ಕ್ರಮವನ್ನು ರೂಪಿಸುವ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಟುಗಳನ್ನೊಳಗೊಂಡ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳ ಚಿಂತನಾಕ್ರಮ ಮತ್ತು ಆಲೋಚನಾಕ್ರಮಗಳಿಗೆ ಹೊಸ ನೆಲೆಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಇತ್ತಿಚಿನ ೫೦ ವರ್ಷಗಳ ಪಠ್ಯ ಕೇಂದ್ರಿತ ನೆಲೆಯ ಚಿಂತನೆಗಳು ಹೊಸ ಕಾಲದ ಅವಶ್ಯಕತೆಗಳನ್ನು ಅಳವಡಿಸಿಕೊಂಡು ಈ ಕಾಲದ ಬಹುತ್ವ ಮಾದರಿಗೆ ಅನುಗುಣವಾಗಿ, ವರ್ತಮಾನದ ಅನೇಕ ಆಸಕ್ತಿಗಳನ್ನು ಸಮಸ್ಯೆಗಳನ್ನು ಸಾಹಿತ್ಯವು ಕೂಡಾ, ತೆರೆದ ಕಣ್ಣುಗಳಿಂದ ಕಾಣುತ್ತಿದೆ ಎಂಬ ಚಿಂತನಶೀಲತೆಯನ್ನು ಪ್ರಕಟಣೆ, ಅಧ್ಯಯನ, ಅಧ್ಯಾಪನಗಳೊಂದಿಗೆ ಹೊರಹಾಕುವುದೇ ಪ್ರಸಾರಾಂಗದ ಮುಖ್ಯ ಉದ್ದೇಶವಾಗಿದೆ.

ಪ್ರಸಾರಾಂಗವು ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ೨೧ ಸೇರಿ ಒಟ್ಟು ೬೮ ಕನ್ನಡ ಪದವಿ ಪಠ್ಯಪುಸ್ತಕಗಳನ್ನು. ೧೩ ವಾರ್ಷಿಕ ವರದಿಗಳನ್ನು, ೨೧ ಇತರೆ ಪುಸ್ತಕಗಳನ್ನು ಪ್ರಕಟಿಸಿದೆ. ‘ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆ’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸುವ ಮೂಲಕ ಸಮಾಜಮುಖಿ ಚಿಂತನೆಯತ್ತ ಮುಖ ಮಾಡಿದೆ. ಈ ನಿಟ್ಟಿನಲ್ಲಿ ತನ್ನ ಕಾರ್ಯಕ್ಷಮತೆಯ ಕ್ಷಿತಿಜವನ್ನು ಇಮ್ಮಡಿಗೊಳಿಸಿದ ಪ್ರಸಾರಾಂಗವು, ಸಂಯೋಜಿತ ಮಹಾವಿದ್ಯಾಲಯಗಳ ಸಹಯೋಗದಲ್ಲಿ ೧೨ ವಿಸ್ತರಣಾ ಮತ್ತು ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿಸಿದೆ. ಅದರಂತೆ ವಿಶ್ವವಿದ್ಯಾಲಯದಲ್ಲಿ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ತನ್ನ ಗುಣಾತ್ಮಕತೆ ಹಾಗೂ ಕಾರ್ಯಕ್ಷಮತೆಗಳ ಮೂಲಕ ಪ್ರಸಾರಾಂಗವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜದ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಮ್ಮೆಯ ಮುಖವಾಣಿಯಾಗುತ್ತಿರುವುದು ಅತೀವ ಸಂತೋಷದ ಸಂಗತಿ.



Top