ವಿಭಾಗದ ಕುರಿತು:
ಮರಾಠಿಯಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 1982 ರಿಂದ ಹಿಂದಿನ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸ್ನಾತಕೋತ್ತರ ಕೇಂದ್ರದ ಭಾಗವಾಗಿದ್ದು, ಸೆಪ್ಟಂಬರ 2010 ರಿಂದ ಪ್ರಸ್ತುತ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂರ್ಣ ಪ್ರಮಾಣದ ವಿಭಾಗಗಳಲ್ಲಿ ಒಂದಾಗಿದೆ. ಮರಾಠಿ ವಿಭಾಗವು ಐದು ಉತ್ತಮ ಅರ್ಹ ಪ್ರಾಧ್ಯಾಪಕರನ್ನು ಹೊಂದಿದೆ. ಮರಾಠಿ ವಿಭಾಗದ ಪ್ರಾಧ್ಯಾಪಕ ಸದಸ್ಯರÀಲ್ಲಿ ಕೆಲವರು ಗುರುಕುಲ ಪ್ರತಿಷ್ಠಾನ ಪ್ರಶಸ್ತಿ, ಪುಣೆ, ವಾಂಗ್ಮಯ ಚರ್ಚಾ ಮಂಡಳ ಸಾಹಿತ್ಯ ಮತ್ತು ಸಂಶೋಧನಾ ಪ್ರಶಸ್ತಿ, ಗಣೇಶ್ ಸ್ಮೃತಿ ಪ್ರಶಸ್ತಿ, ಮಾಚಿಗಡ್ ಸಾಹಿತ್ಯ ಕೊಡುಗೆ ಪ್ರಶಸ್ತಿ, ಕಡೋಲಿ, ವೃತ್ತ ಪತ್ರ ಸೃಷ್ಠಿ ಗೌರವ ಮತ್ತು ಗೌರವ ಪ್ರಶಸ್ತ, ದಲಿತ ಸಾಹಿತ್ಯ ಪರಿಷದ, ಗದಗ ಪ್ರಶಸ್ತಿಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುತ್ತಾರೆಂದು ಹೆಮ್ಮೆಯ ವಿಷಯವಾಗಿದೆ. ವಿಭಾಗವು ಗ್ರಂಥಾಲಯ ಮತ್ತು ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿದೆ.
ಧ್ಯಯೋದ್ದೇಶ:
ಮರಾಠಿಯಲ್ಲಿನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ದೃಷ್ಟಿ ಕನ್ನಡ - ಮರಾಠಿ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಲನಾತ್ಮಕ ಸಂಶೋಧನಾ ಅಧ್ಯಯನಕ್ಕಾಗಿ ಸುಧಾರಿತ ಮತ್ತು ಮಾದರಿ ವಿಭಾಗವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವುದು. ಉತ್ತರ ಕರ್ನಾಟಕ, ಗೋವಾ ಮತ್ತು ಪಶ್ಚಿಮ ಮಹಾರಾಷ್ಟ್ರ ಗಡಿಯಲ್ಲಿ ಕಲಿಕೆ, ಉನ್ನತ ಶಿಕ್ಷಣ ಮತ್ತು ತುಲನಾತ್ಮಕ ಸಂಶೋಧನೆಗಾಗಿ ನಾಯಕತ್ವದ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
ಘನೋದ್ದೇಶ:
1. ಆಧುನಿಕ ಮಲ್ಟಿಮೀಡಿಯಾ, ಪ್ರಪಂಚದ ಸವಾಲುಗಳನ್ನು ಎದುರಿಸಲು ಸಂವಹನ, ಅನುವಾದ, ಸೃಜನಶೀಲ ಬರವಣಿಗೆ, ತಂತ್ರಜ್ಞಾನ ಇತ್ಯಾದಿ ವಿವಿಧ ಕೌಶಲ್ಯಗಳನ್ನು ಕಲಿಸಬೇಕಾಗಿರುತ್ತದೆ.
2. ವಿವಿಧ ಕಾರ್ಯಾಗಾರಗಳು ಮತ್ತು ತರಬೇತಿಗಳ ಮೂಲಕ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ನೇಮಕಾತಿಗಾಗಿ ಸ್ಪರ್ಧಾತ್ಮಕ ಮನೋಭಾವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವನ್ನು ಬೆಳೆಸಿಕೊಡಬೇಕಾಗಿರುತ್ತದೆ.
3. ವ್ಯಕ್ತಿ ಮತ್ತು ದೇಶದ ಏಳಿಗೆಗಾಗಿ ಉದ್ಯಮಶೀಲತೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಮನುಕುಲದ ಶಾಂತಿ ಮತ್ತು ಸಂತೋಷಕ್ಕಾಗಿ ಮತ್ತು ಶ್ರೇಷ್ಠತೆಗಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿರುತ್ತದೆ.
4. ಶೈಕ್ಷಣಿಕ, ಸಾಹಿತ್ಯ ಮತ್ತು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಉತ್ತಮ ಜ್ಞಾನ, ಪ್ರಾಮಾಣಿಕ, ಉತ್ತಮ ಮಾನವೀಯ ವಿದ್ಯಾರ್ಥಿಗಳನ್ನು ಉತ್ಪಾದಿಸಲು ಮೌಲ್ಯಯುತ ಶಿಕ್ಷಣವನ್ನು ಒದಗಿಸಬೇಕಾಗಿರುತ್ತದೆ.
5. ಮರಾಠಿ ಭಾಷೆಯ ಬೆಳವಣಿಗೆಗೆ ಮತ್ತು ಕನ್ನಡ ಮತ್ತು ಮರಾಠಿ ನಡುವಿನ ಸಂಬಂಧಗಳ ಬೆಳವಣಿಗೆಗೆ ವಿಶೇಷವಾಗಿ ತುಲನಾತ್ಮಕ ಸಂಶೋಧನೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಬಲಪಡಿಸಬೇಕಾಗಿರುತ್ತದೆ.