Hide Main content block
ಶ್ರೀ. ಸಂತೋಷ ಕಾಮಗೌಡ ಕೆ.ಎ.ಎಸ್. (ಹಿರಿಯ ಶ್ರೇಣಿ) ಕುಲಸಚಿವರು ಕ್ರಿಯಾಶೀಲ ಅನುಭವಿ ಆಡಳಿತಗಾರರಾದ ಶ್ರೀ.ಸಂತೋಷ ಕಾಮಗೌಡ ಅವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಬ್ಬೂರಿನವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಲ್ಲಿಯೇ ಮುಗಿಸಿ ನಂತರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಜೊತೆಗೆ ಎಂ.ಬಿ.ಎ ಯನ್ನು ಎನ್.ಆಯ್.ಬಿ.ಎಂ. ನಿಂದ ಪಡೆದಿದ್ದಾರೆ. 2011ರ ಕೆ.ಎ.ಎಸ್. ಪರೀಕ್ಷೆಯ ತಹಸೀಲ್ದಾರ ಹುದ್ದೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದವರು ಮುಂದೆ ಓದು ಮತ್ತು ಅಧ್ಯಯನಶೀಲತೆಯಿಂದ 2014ರ ಬ್ಯಾಚ್‌ನ ಕೆ.ಎ.ಎಸ್. ಪರೀಕ್ಷೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕ ಆಡಳಿತ ಸೇವೆಗೆ ೨ನೇ ಬಾರಿ ಅಧಿಕಾರಿಯಗಿ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ನಿರ್ವಹಿಸಿದ ಜವಾಬ್ದಾರಿಗಳು:- ಕೇಂದ್ರ ಸರ್ಕಾರದ ಭಾರತೀಯ ಅಂಚೆ ಇಲಾಖೆಯಲ್ಲಿ ವ್ಯವಸ್ಥೆಯ ನಿರ್ವಾಹಕರಾಗಿ (SA) ಒಂಬತ್ತು ವರ್ಷ ಸೇವೆ ಸಲ್ಲಿಸಿದ್ದಾರೆ. ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನ ತಹಸೀಲ್ದಾರ ಆಗಿ ತಮ್ಮ ಪ್ರೊಭೇಷನರಿ ಅವಧಿಯನ್ನು ಮುಗಿಸಿ, ಮಂದೆ ಕೊಪ್ಪಳ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತ ಅಧಿಕಾರಿಯಾಗಿ, ಯಾದಗಿರಿ ಜಿಲ್ಲೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ, ರಾಯಚೂರ, ಚಿಕ್ಕೋಡಿ ಮತ್ತು ಜಮಖಂಡಿ ಕಂದಾಯ ಉಪವಿಭಾಗಗಳಿಗೆ ಸಹಾಯಕ ಆಯುಕ್ತರು ಮತ್ತು ಉಪ ವಿಭಾಗೀಯ ದಂಡಾಧಿಕಾರಿಯಾಗಿ ಜನಾನುರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾಗಲಕೋಟೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಮತ್ತು ಬೆಳಗಾವಿಯ ಸ್ಮಾರ್ಟ್ ಸಿಟಿಯ ಜಂಟಿ ಎಂ.ಡಿ.ಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಅಧ್ಯಯನಶೀಲ ಯವಕರ ಕುರಿತು ಪ್ರೇರಣಾತ್ಮಕ ಮಾತುಗಳನ್ನಾಡುವ ಇವರು ಸದಾ ಅಧ್ಯಯನ ಮತ್ತು ಅಧ್ಯಾಪನವನ್ನು ಹವ್ಯಾಸವಾಗಿ ರೂಢಿಸಿಕೊಂಡಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಪುಸ್ತಕಗಳನ್ನು ರಚಿಸಿದ್ದಾರೆ.