ಇಂಗ್ಲೀಷ ವಿಭಾಗ

ವಿಭಾಗದ ಕುರಿತು:ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು 2011-12 ರಲ್ಲಿ ಸ್ವತಂತ್ರ ಸ್ಥಾನಮಾನವನ್ನು ಪಡೆದಾಗ ಇಂಗ್ಲಿಷ್ ಅಧ್ವಯನ ವಿಭಾಗವನ್ನು ಸ್ಥಾಪಿಸಲಾಯಿತು.

ಪ್ರಸ್ತುತ ಏಳು ಸಹಾಯಕ ಪ್ರಾಧ್ಯಾಪಕರು ಹಾಗೂ ಒಬ್ಬರು ಪ್ರಾಧ್ಯಾಪಕರು ಈ ವಿಭಾಗದಲ್ಲಿ ಬೋಧಿಸುತ್ತಿದ್ದಾರೆ. ಐದು ಸಹಾಯಕ ಪ್ರಾಧ್ಯಾಪಕರು ಮುಖ್ಯ ಆವರಣದಲ್ಲಿ ಇದ್ದು, ವಿಜಯಪುರದ ಸ್ನಾತಕೋತ್ತರ ಕೇಂದ್ರದಲ್ಲಿ ಒಬ್ಬರು ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಒಬ್ಬರು ನಿಯೋಜನೆಗೊಂಡಿದ್ದಾರೆ. ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ವಿಭಾಗವು ವರ್ಷಪೂರ್ತಿ ಬೋಧನೆ, ಕಲಿಕೆ, ಸಹಪಠ್ಯ, ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಧ್ಯಯೋದ್ದೇಶ:ಅತ್ಯುತ್ತಮವಾದ ಬೋಧನಾ ವಿಷಯಗಳನ್ನು ಅಭಿವೃದ್ಧಿ ಪಡಿಸುವುದರ ಮೂಲಕ, ಇಂಗ್ಲಿಷ್ ಅಧ್ಯಯನಗಳಲ್ಲಿನ ಇತ್ತೀಚಿನ ವಿದ್ಯಮಾನಗಳು ಹಾಗೂ ಒಲವುಗಳನ್ನು ಪರಿಚಯಿಸುವುದರ ಮೂಲಕ, ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಾದರೀಯ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮುವುದು.

ಘನೋದ್ದೇಶ:ಪರಿವರ್ತಕ ಕಲಿಕೆಯ ಮಾದರಿಯ ಆದರ್ಶಗಳಿಗೆ ಬದ್ಧವಾಗಿರುವ ಇಂಗ್ಲಿಷ್ ವಿಭಾಗವು ವಿವಿಧ ವಿಭಾಗಗಳ ನಡುವೆ ಅರ್ಥಪೂರ್ಣ ಸಂವಾದವನ್ನು ಬೆಳೆಸುವ ಮತ್ತು ಸಾಹಿತ್ಯಿಕ ಅಧ್ಯಯನಗಳ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಇಂಗ್ಲಿಷ ಅಧ್ಯಯನದ ಸಾಧ್ಯತೆಗಳನ್ನು ವಿಸ್ತರಿಸಲು ಆಶಿಸಿದೆ.


Top