ಡಾ.ಚಂದ್ರಕಾಂತ್ ಎನ್. ವಾಘಮಾರೆ
Special Officer SC/ST Cell

ಪ.ಜಾ/ಪ.ಪಂ. ಘಟಕದ ಬಗ್ಗೆ :


ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆರಂಭದಿಂದಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಜಾರಿಗೆ ತರುವ ಮೂಲಕ ಪ.ಜಾ/ಪ.ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳ ಹಿತಾಶಕ್ತಿ ಕಾಪಾಡುವ ಉದ್ದೇಶದಿಂದ ಘಟಕ ಪ್ರಾರಂಭವಾಯಿತು. ಇದರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಡೇಸ್ಕಾಲರ್ ಮತ್ತು ಹಾಸ್ಟೆಲರ್ (ಇಬಿಎಲ್) ನಂತಹ ವಿದ್ಯಾರ್ಥಿವೇತನ ಸಿಗುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಪ್ರತಿ ವರ್ಷ ಪ್ರವೇಶ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬ್ರಹ್ಮಪುತ್ರ ಮತ್ತು ಕೃಷ್ಣಾ ವಸತಿ ನಿಲಯಗಳಲ್ಲಿ ಪ್ರವೇಶಾತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸದರಿ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬೋಜನಾ ವೆಚ್ಚವೆಂದು ಮುಂಗಡವಾಗಿ ವಿಶ್ವವಿದ್ಯಾಲಯದಿಂದ ಭರಿಸಲಾಗುತ್ತದೆ ನಂತರ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರಿಂದ ವಿಶ್ವವಿದ್ಯಾಲಯಕ್ಕೆ ಮರುಹೊಂದಾಣಿಕೆ ಮಾಡಲಾಗುತ್ತದೆ. ಮತ್ತು ಎಸ್.ಸಿ.ಪಿ/ಟಿ.ಎಸ್.ಪಿ ಕ್ರಿಯಾಯೋಜನೆಯಡಿಯಲ್ಲಿ ಬ್ರಹ್ಮಪುತ್ರ ಮತ್ತು ಕೃಷ್ಣಾ ವಸತಿನಿಲಯಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೋಜನಾ ವೆಚ್ಚವನ್ನು ವಿತರಿಸಲಾಗುತ್ತಿದೆ. ಪಿ.ಎಚ್ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶಿಷ್ಯವೇತನ ಸಾದಿಲ್ವಾರು ವೆಚ್ಚ ಪ್ರಂಬಂಧ ಮಂಡನೆಗಾಗಿ ಹಣಕಾಸಿನ ನೆರವು ನೀಡಲಾಗುತ್ತಿದೆ, ಆಯಾ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮಗಳನ್ನು ಘಟಕದಿಂದ ನಡೆಸಲಾಗುತ್ತಿದೆ.

ದೃಷ್ಟಿಕೋನ ಮತ್ತು ಗುರಿ/ ಗುರಿಗಳು :


• ಸರಕಾರಿ ಮಾನದಂಡಗಳಿಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ಖಾತರಿಪಡಿಸುವ ಮೂಲಕ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು.
• ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಗಳನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಅನುಷ್ಠಾನಗೋಳಿಸುವುದು.
• ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಅನುಕೂಲತೆಗಳನ್ನು ಕಲ್ಪಿಸಿ ನಿರ್ವಹಿಸಲು ಕರ್ನಾಟಕ ಸರಕಾರದಿಂದ ಅಗತ್ಯವಾದ ಅನುದಾನವನ್ನು ಪಡೆದುಕೊಳ್ಳುವುದು.
• ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಶ್ಯಕತೆಗಳನ್ನು ಸಾಧಿಸಲು ಸರಕಾರ ಮತ್ತು ವಿಶ್ವವಿದ್ಯಾಲಯದ ಮಾನದಂಡಗಳ ಪ್ರಕಾರ ಆರ್ಥಿಕ ನೆರವು ನೀಡುವುದು.
• ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳಿಗೆ ಅದರ ಕೌಶಲ್ಯ ಮತ್ತು ಜ್ಞಾನವನ್ನು ಬಲಪಡಿಸಲು ತರಬೇತಿ ನೀಡುವುದು.
• ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳಿಗೆ ಘಟಕದಿಂದ ವಿಬಿನ್ನ ಜವಾಬ್ದಾರಿಗಳನ್ನು ಪೂರೈಸುವ ಸಲುವಾಗಿ ಪ.ಜಾ/ಪ.ಪಂಗಡದ ಘಟಕವನ್ನು ಬಲಪಡಿಸುವುದು.


Top