ಕನ್ನಡ ವಿಭಾಗ

ವಿಭಾಗದ ಕುರಿತು:
ಶಾಸ್ತ್ರೀಯ ಕನ್ನಡ ಅಧ್ಯಯನಗಳ ಶಾಲೆಯು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಹುಮುಖ್ಯ ಮತ್ತು ಸ್ವತಂತ್ರವಾದ ಶಾಲೆಗಳಲ್ಲಿ ಒಂದಾಗಿದೆ. ಇದು 2010 ರಲ್ಲಿ ಪ್ರಾರಂಭವಾಯ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅಸ್ತಿತ್ವದಲ್ಲಿ ಬರುವದಕ್ಕಿಂತ ಮುಂಚೆ ಅದು ಕನ್ನಡ ವಿಭಾಗವಾಗಿತ್ತು, ಅಲ್ಲದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಾತ್ರವಾಗಿತ್ತು. ಈಗ ಈ ಶಾಲೆಯು ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆ ಮತ್ತು ಇದಕ್ಕಾಗಿ ಪ್ರತ್ಯೇಕ ಡೀನ್ರ ನೇಮಕಾತಿ ಆಗುತ್ತದೆ. ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ಕನ್ನಡ ಸಾಹಿತ್ಯ, ಸಾಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸುವುದಕ್ಕಾಗಿ, ಬೆಳೆಸುವುದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಶಾಲೆ ಇದಾಗಿದೆ. ಇದರಲ್ಲಿ ಎಂಟು ಜನ ಪರಿಣತ, ಪಾಂಡಿತ್ಯ ಪೂರ್ಣ ಮತ್ತು ಸದಾ ಕರ್ತವ್ಯಶೀಲರಾದ ಬೋಧಕ ಸಿಬ್ಬಂದಿಯವರು ಇದ್ದಾರೆ; ಜೊತೆಗೆ ದಕ್ಷರಾದ ಬೋಧಕೇತರ ಸಿಬ್ಬಂದಿವರ್ಗವೂ ಇದೆ. ಕರ್ನಾಟಕ ಗಡಿ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಶಾಲೆ ದ್ವೈಭಾಷಿಕ ವಾತಾವರಣದಲ್ಲಿ ಕಾರ್ಯಪ್ರವೃತ್ತವಾಗಿದೆ. ಹೀಗಾಗಿ ಎರಡು ಭಿನ್ನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಜೋಡಿಸುವ ಸೇತುವೆಯಾಗಿ ಶಾಲೆ ದುಡಿಯುತ್ತಲಿದೆ. ಈ ಶಾಲೆಯಲ್ಲಿ ಕನ್ನಡ ಪಿಎಚ್.ಡಿ, ಕನ್ನಡ ಸ್ನಾತಕೋತ್ತರ ವ್ಯಾಸಂಗ, ಅನುವಾದದಲ್ಲಿ ಡಿಪ್ಲೋಮಾ ಕೋರ್ಸ, ವಚನ-ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ, ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಕೋರ್ಸ್, ಜೈನಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಗಾಂಧೀ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸುವ ಯೋಜನೆ ಇದೆ.

ಧ್ಯಯೋದ್ದೇಶ:

ಜಾಗತಿಕ ಮಟ್ಟದಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಮತ್ತು ಅದರ ಸಂಸ್ಕೃತಿಯನ್ನು ಪ್ರಸಾರ ಮಾಡುವುದು.

ಘನೋದ್ದೇಶ:

1. ವಿಶ್ವದೆಲ್ಲೆಡೆ ಕನ್ನಡ ಭಾಷೆ, ಸಾಹಿತ್ಯ, ಜೀವನ ಶೈಲಿಗಳನ್ನೊಳಗೊಂಡ ಪ್ರಾಚೀನ ಕನ್ನಡವನ್ನು ಪಸರಿಸುವುದು.
2. ಗುರಿ : ಶಾಸ್ತ್ರೀಯ ರೀತಿಯಲ್ಲಿ ಶಾಸ್ತ್ರೀಯ ಕನ್ನಡ ಸಾಹಿತ್ಯವನು ಪ್ರಚುರಪಡಿಸುವುದು. ಕನ್ನಡ ಭಾಷೆಯ ಸತ್ತ್ವ, ಶಕ್ತಿಯ ಅರಿವನ್ನುಂಟು ಮಾಡುವುದು.


Top