ಗಣಕಯಂತ್ರ ವಿಜ್ಞಾನ ವಿಭಾಗ

ವಿಭಾಗ ವಿವರ:
ಕಂಪ್ಯೂಟರ್ ವಿಜ್ಞಾನ ವಿಭಾಗವನ್ನು 2011 ರಲ್ಲಿ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಮತ್ತು ಕಂಪ್ಯೂಟಿಂಗ್ ಸಾಯಿನ್ಸಸ್ ಅಡಿಯಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ, ಈ ವಿಭಾಗವು 6 ಶಾಶ್ವತ ಬೋಧಕರನ್ನು ಒಳಗೋಂಡಿದೆ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದರ ಅಡಿಯಲ್ಲಿ ಎಂಎಸ್ಸಿ(ಕಂಪ್ಯೂಟರ್ ಸಾಯಿನ್ಸ) ಮತ್ತು ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂ.ಸಿ.ಎ.) ಎಂಬ ಎರಡು ಸ್ನಾತಕೋತ್ತರ ಕೋರ್ಸಗಳ ಜೊತೆಗೆ ಪಿಎಚ್‌.ಡಿ. ಪ್ರೋಗ್ರಾಂ ನಡೆಸುತ್ತದೆ. ವಿಜಯಪುರದ ಪಿ ಜಿ ಸೆಂಟರ್‌ ನಲ್ಲಿ ಎಂಎಸ್ಸಿ (ಕಂಪ್ಯೂಟರ್ ಸಾಯಿನ್ಸ) ಸ್ನಾತಕೋತ್ತರ ಕೋರ್ಸನ್ನು ನಡೆಸುತ್ತದೆ. ಕೆ-ಫಿಸ್ಟ್ ಯೋಜನೆಯಡಿ, ಲೆವಲ್ -II ರಲ್ಲಿ, ಕರ್ನಾಟಕ ಸ್ಟೇಟ್ ವಿಜನ್ ಗ್ರೂಪ್ ಆಫ್ ಕಂಪ್ಯೂಟರ್ ಸೈನ್ಸ್ (ವಿ ಜಿ ಎಸ್ ಟಿ) ಇಲಾಖೆಯು, ತಲಾ ರೂ.20 ಲಕ್ಷ ರೂಪಾಯಿಯನ್ನು, ಸತತ ಎರಡು ವಾರ್ಷಿಕ ವರ್ಷಗಳ ಸಹಯೋಗದಿಂದ ವಿಭಾಗದ ಮೂಲಸೌಕರ್ಯ ಸೌಲಭ್ಯವನ್ನು ಬಲಪಡಿಸಿ ಕೊಳ್ಳಲಾಗಿದೆ.

ಧ್ಯಯೋದ್ದೇಶ:

ಜಾಗತಿಕ ಶ್ರೇಷ್ಠತೆ, ಸ್ಥಳೀಯ ಪ್ರಸ್ತುತತೆ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಸಮಗ್ರ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಬಲವಾದ ಬೋಧನೆ ಮತ್ತು ಸಂಶೋಧನಾ ವಾತಾವರಣವನ್ನು ನಿರ್ಮಿಸುವುದು.
ಘನೋದ್ದೇಶ:


1. ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು, ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಪ್ರಮುಖ ಅಂಶವಾಗಿ, ವಿದ್ಯಾರ್ಥಿಗಳಿಗೆ ಉತ್ತಮ-ಗುಣಮಟ್ಟದ ವೃತ್ತಿಜೀವನವನ್ನು ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ನಿರಂತರವಾಗಿ ಬದಲಾಗುತ್ತಿರುವ ಮತ್ತು ಸವಾಲಿನ ಜಾಗತಿಕ ಕೆಲಸದ ವಾತಾವರಣದಲ್ಲಿ ಅವರಿಗೆ ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುತ್ತದೆ.
2. ಉದ್ಯಮದ ಸಹಯೋಗದೊಂದಿಗೆ ಸಂಶೋಧನಾ ಚಟುವಟಿಕೆಗಳನ್ನು ಬಲಪಡಿಸುವುದು, ವಿದ್ವತ್ಪೂರ್ಣ ಪ್ರಕಟಣೆಗಳ ಮೂಲಕ ಜ್ಞಾನವನ್ನು ಪ್ರಸಾರ ಮಾಡುವುದು ಮತ್ತು ಸಂಶೋಧನಾ ಶ್ರೇಷ್ಠತೆಯನ್ನು ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳಾಗಿ ಭಾಷಾಂತರಿಸುವುದು.
3. ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ಸಾಧಿಸಲು ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಮೌಲ್ಯವರ್ಧನೆಯ ವಾತಾವರಣವನ್ನು ಒದಗಿಸುವುದು.
4. ಶೈಕ್ಷಣಿಕ, ತಾಂತ್ರಿಕ, ಉದ್ಯಮಶೀಲತೆ ಮತ್ತು ವೃತ್ತಿಪರ ಚಟುವಟಿಕೆಗಳ ಮೂಲಕ ಸ್ಥಳೀಯ ಮತ್ತು ಜಾಗತಿಕ ಸಂಸ್ಥೆಗಳಿಗೆ ಉಪಯುಕ್ತ ಸೇವೆಯನ್ನು ನೀಡುವುದು.


Top