ಪ್ರೊ. ಎಸ್.ಎಂ. ಗಂಗಾಧರಯ್ಯ ನಿರ್ದೇಶಕರು, ಸಿ.ಡಿ.ಸಿ.
E-mail : cdc@rcub.ac.in
|
ಗಡಿನಾಡಿನ ಉನ್ನತ ಶಿಕ್ಷಣದ ಹೊಂಗಿರಣವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸಪ್ಟಂಬರ-2010 ರಲ್ಲಿ ಪ್ರಾರಂಭಿಸಿದ್ದು, ವಿಶ್ವವಿದ್ಯಾಲಯವು ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಮೊದಲಿನ ಮಾತೃ ಸಂಸ್ಥೆಯಾದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ 272 ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿಯ, ಕಾಲೇಜು ಅಭಿವೃದ್ಧಿ ಮಂಡಳಿ ವಿಭಾಗವು 2011-12 ನೇ ಶೈಕ್ಷಣಿಕ ಸಾಲಿನಿಂದ ಸಂಯೋಜನೆ ಪ್ರಕ್ರಿಯೆಯನ್ನು ಪ್ರಾರಂಭಿಸಿ ಇಲ್ಲಿಯವರೆಗೆ ಅಂದರೆ 2019-20 ನೇ ಶೈಕ್ಷಣಿಕ ಸಾಲಿನ ವರೆಗೆ ಸಂಯೋಜನೆಯ ಪ್ರಕ್ರಿಯೆಯೊಂದಿಗೆ 09 ಶೈಕ್ಷಣಿಕ ವರ್ಷಗಳ ಸಂಯೋಜನೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುತ್ತದೆ ಹಾಗೂ 2020-21 ನೇ ಶೈಕ್ಷಣಿಕ ಸಾಲಿನ ಸಂಯೋಜನೆಯು ಕಾರ್ಯವು ಪ್ರಗತಿಯಲ್ಲಿರುತ್ತದೆ. ಇದಕ್ಕೆ ಮುಂದುವರೆದು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ 272 ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡನಂತರ 2011-12 ನೇ ಶೈಕ್ಷಣಿಕ ಸಾಲಿನಿಂದ 2019-20 ನೇ ಶೈಕ್ಷಣಿಕ ಸಾಲಿನವರೆಗೆ ಸಂಯೋಜನೆ ಪ್ರಕ್ರಿಯೆಯನ್ನು ಕೈಗೊಂಡು ಇಲ್ಲಿಯವರೆಗೆ ಸುಮಾರು 117 ವಿವಿಧ ಬಗೆಯ ಹೊಸ ಮಹಾವಿದ್ಯಾಲಯಗಳಿಗೆ ಸಂಯೊಜನೆಯನ್ನು ನೀಡಿ, ಒಂದು ಘಟಕ ಮಹಾವಿದ್ಯಾಲಯ ಮತ್ತು ಮೂರು ಸ್ವಾಯತ್ತ ಮಹಾವಿದ್ಯಾಲಯನ್ನು ಹೊಂದಿ, ಇಲ್ಲಿಯವರಗೆ ಒಟ್ಟು 389 ಮಹಾವಿದ್ಯಾಲಯಗಳನ್ನು ಸಂಯೋಜನೆ ಹೊಂದಿ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿರುವ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿರುತ್ತದೆ ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪೂರ ಹಾಗೂ ಬಾಗಲಕೋಟ ಜಿಲ್ಲೆಗಳ ಜನತೆಯ ಉನ್ನತ ಶಿಕ್ಷಣದ ಅವಶ್ಯಕತೆಗಳನ್ನು ಈಡೇರಿಸುತ್ತಿದೆ.
ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣವನ್ನು ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡುವ ಮಹತ್ವಾಕಾಂಕ್ಷಿ ಉದ್ದೇಶವನ್ನು ನಮ್ಮ ವಿಶ್ವವಿದ್ಯಾಲಯವು ಈಡೇರಿಸುತ್ತಲಿದೆ. ಒಟ್ಟಾರೆಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮುಖಾಂತರ ಗಡಿ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗೆ ಸ್ಪಂದಿಸುತ್ತಿದೆ. ಇದರ ಜೊತೆಗೆ ವಿವಿಧ ಸಂಘ/ಸಂಸ್ಥೆ/ಟ್ರಸ್ಟ್/ ಮಹಾವಿದ್ಯಾಲಯಗಳಿಂದ ವಿವಿಧ ಬಗೆಯ ಸಂಯೋಜನೆಗೆ ಅರ್ಜಿಯನ್ನು ಸ್ವಿಕರಿಸಿಕೊಂಡು ಅವುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ-2000 ರ ಅನ್ವಯ ಕ್ರಮ ಕೈಗೊಂಡು ವಿವಿಧ ಬಗೆಯ ಸಂಯೋಜನೆಯನ್ನು ನೀಡಲಾಗುತ್ತದೆ. ಇದರ ಜೋತೆಗೆ ಮಹಾವಿದ್ಯಾಲಯದವರು 2(ಎಫ್), 12(ಬಿ), ಮಾನ್ಯತೆ ಪಡೆಯುವುದಕ್ಕಾಗಿ ಮತ್ತು ಯು.ಜಿ.ಸಿ. ಗೆ ಸಂಬಂಧಿಸಿದಂತೆ ಸಲ್ಲಿಸುವ ಪ್ರಸ್ತಾವನೆಗಳಿಗೆ ಕ್ರಮ ಜರುಗಿಸುವುದರ ಜೊತೆಗೆ ಮಹಾವಿದ್ಯಾಲಯದವರ ಮೂಲಭೂತ ಮತ್ತು ಶೈಕ್ಷಣಿಕ ಬೆಳವಣಿಗೆ ದೃಷ್ಠಿಯಿಂದ ಇನ್ನಿತರ ಕಾರ್ಯಗಳನ್ನು ಜರುಗಿಸಲಾಗಿತ್ತಿದೆ.
|