ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೊಡನೆ ನೇರ ಸಂಪರ್ಕ ಇಟ್ಟುಕೊಳ್ಳಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮಾ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷದಲ್ಲಿ ದಿನಾಂಕ: 24/09/1969 ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ವಿ. ಕೆ. ಆರ್. ವಿ. ರಾವ್ ಅವರಿಂದ ಉದ್ಘಾಟಿತವಾಯಿತು.
ಕರ್ನಾಟಕದ ಉತ್ತರ ಗಡಿಭಾಗದ ಬೆಳಗಾವಿಯಲ್ಲಿ ನೆಲೆಗೊಂಡಿರುವ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ವತಂತ್ರ ವಿಶ್ವವಿದ್ಯಾಲಯವಾಗಿ ಅಸ್ತಿತ್ವ ಕಂಡುಕೊಂಡು ದಶಮಾನೋತ್ಸವ ಆಚರಿಸುತ್ತಿದೆ. ಶೈಕ್ಷಣಿಕವಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸುವ ಕನಸು ಹಾಗೂ ಆಶೋತ್ತರಗಳೊಂದಿಗೆ ವಿಶ್ವವಿದ್ಯಾಲಯವು ಬೆಳಗಾವಿ, ಹಾಗೂ ವಿಜಯಪೂರ ಜಿಲ್ಲೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 389 ಮಹಾವಿದ್ಯಾಲಯಗಳು ಸಂಯೋಜಿತಗೊಂಡಿವೆ. 389 ಕಾಲೇಜುಗಳಲ್ಲಿ ಒಟ್ಟು 160 ಎನ್.ಎಸ್.ಎಸ್. ಘಟಕಗಳಿವೆ. ಒಟ್ಟಾರೆಯಾಗಿ ಕೇಂದ್ರ ಸರಕಾರದ ಅನುದಾನದಿಂದ 15400 ಎನ್.ಎಸ್.ಎಸ್. ಸ್ವಯಂಸೇವಕರನ್ನು ಒಳಗೊಂಡಿದೆ. ಶೈಕ್ಷಣಿಕ ವಿಸ್ತರಣೆಯ ಒಂದು ಭಾಗವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಯುವ ಪೀಳಿಗೆಗೆ ಪ್ರೇರಕವಾಗಬಲ್ಲ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶವು ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಎನ್.ಎಸ್.ಎಸ್. ಕೋಶಕ್ಕೆ ಸನ್ಮಾನ್ಯ ಕುಲಪತಿಗಳವರ, ಕುಲಸಚಿವರ ಹಾಗೂ ಅಧಿಕಾರಿ ವರ್ಗದವರ ಸಂಪೂರ್ಣ ಬೆಂಬಲ ದೊರೆಯುತ್ತಿದೆ.
ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಒರಿಸ್ಸಾ ರಾಜ್ಯದ ಕೋನಾರ್ಕ್‌ನ ಸೂರ್ಯ ದೇವಾಲಯದ ಕಲ್ಲು ರಥದ ಎಂಟು ಕಡ್ಡಿಗಳ ಚಕ್ರ. ಈ ಚಕ್ರದ ಒಳಾಂಗಣ ಕೆಂಪು ಬಣ್ಣವನ್ನು, ಚಕ್ರದ ಹೊರಗಿನ ವ್ಯೂಹ ನೀಲಿ ಬಣ್ಣವನ್ನು ಹಾಗೂ ಕಡ್ಡಿಗಳು ಮತ್ತು ಚಕ್ರದ ಒಳಗಿನ ವ್ಯೂಹ ಬಿಳಿ ಬಣ್ಣವನ್ನು ಒಳಗೊಂಡಿದೆ. ಕೆಂಪುಬಣ್ಣ ಜೀವಂತಿಕೆ, ಸ್ಪೂರ್ತಿ ಮತ್ತು ಚೈತನ್ಯ, ನೀಲಿ ಬಣ್ಣ ಹೃದಯ ವೈಶಾಲ್ಯತೆ ಸಮೃದ್ಧಿಗೂ, ಬಿಳಿ ಬಣ್ಣ ಸರಳತೆ, ಪ್ರಾಮಾಣಿಕತೆ ಮತ್ತು ಶುಭ್ರತೆಗೂ ಪ್ರತೀಕವಾಗಿದೆ.
ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಪ್ರಾವಿಣ್ಯತೆ ಮತ್ತು ಜ್ಞಾನಾರ್ಜನೆ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣ ಹಾಗೂ ಮುಂದಾಳುತನದ ಗುಣಗಳನ್ನು ಬೆಳೆಸುವುದು.
ಅ) ಸ್ವಯಂ ಸೇವಕರಿಗೆ:
ಬ) ಎನ್. ಎಸ್.ಎಸ್ ಅಧಿಕಾರಿಗಳಿಗೆ:
ಕ) ಮಹಾವಿದ್ಯಾಲಯಗಳಿಗೆ:
ವಿಶ್ವವಿದ್ಯಾಲಯ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಇಡೀ ಸಮುದಾಯಗಳ ಸಹಕಾರದಿಂದ ಎನ್.ಎಸ್.ಎಸ್. ಸುಸಂಸ್ಕೃತ ಪ್ರಜೆಗಳನ್ನು ಸೃಜಿಸುವದರ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ಕಟ್ಟುವ ಕೆಲಸದಲ್ಲಿ ಸದಾ ನಿರತವಾಗಿದೆ.
ಈ ಯೋಜನೆಯಲ್ಲಿ ಸರ್ಕಾರ, ಜಿಲ್ಲಾ ಪಂಚಾಯತ್, ತಾಲ್ಲೂಕ ಪಂಚಾಯತ್, ಗ್ರಾಮಪಂಚಾಯತ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಾಯ ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಈ ಕೆಳಕಂಡ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ದೈನಂದಿನ ಚಟುವಟಿಕೆಯಲ್ಲಿ ಸ್ವಯಂ ಸೇವಕ ಒಂದು ವರ್ಷದಲ್ಲಿ ಕನಿಷ್ಠ 120 ಗಂಟೆಗಳಂತೆ 2 ವರ್ಷಗಳ ಅವಧಿಯಲ್ಲಿ (ವಿಷೇಶ ಶಿಬಿರ ಕಾರ್ಯಕ್ರಮವನ್ನು ಹೊರತುಪಡಿಸಿ) 240 ಗಂಟೆಗಳ ಸೇವಾಕಾರ್ಯವನ್ನು ಮಾಡಲೇಬೇಕು. ವಾರದಲ್ಲಿ ಕನಿಷ್ಠ 4 ಗಂಟೆ ಚಟುವಟಿಕೆಗಳ ಜೊತೆಗೆ ದತ್ತು ಗ್ರಾಮಗಳಲ್ಲಿ ನಡೆಸಬಹುದಾದ ವಾರಾಂತ್ಯ ಶಿಬಿರಗಳು ಇದರಲ್ಲಿ ಸೇರಿರುತ್ತವೆ.
ವಿಶೇಷ ಶಿಬಿರವನ್ನು ದತ್ತು ಗ್ರಾಮದಲ್ಲಾಗಲಿ ಅಥವಾ ಬೇರೆ ಎಲ್ಲಾದರೂ 7 ದಿನಗಳ ಕಾಲ ನಡೆಸಲಾಗುವುದು. ಈ ಅವಧಿಯಲ್ಲಿ ಸ್ವಯಂಸೇವಕರು ತಮ್ಮ ಮನೆ ಮತ್ತು ಕಾಲೇಜಿನಿಂದ ದೂರವಿದ್ದು ಹೆಚ್ಚು ಪರಿಣಾಮಕಾರಿ ಸೇವಾ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ನಾಯಕತ್ವ ಶಿಬಿರ, ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
| ಹೆಸರು: | ಡಾ. ಕನಕಪ್ಪ ಪೂಜಾರ |
|---|---|
| ವಿದ್ಯಾರ್ಹತೆ: | ಎಂ.ಎ, ಎಮ್.ಎಡ್, ಪಿಎಚ್.ಡಿ |
| ಹುದ್ದೆ: | ಕಾರ್ಯಕ್ರಮ ಸಂಯೋಜನಾಧಿಕಾರಿ |
| ಇ-ಮೇಲ್: | pujarkr1@rcub.ac.in, nss@rcub.ac.in |
| ದೂರವಾಣಿ: | 9449575108 |
| ಕ್ರ. ಸಂ | ಸಿಬ್ಬಂದಿಯ ಹೆಸರು | ಪದನಾಮ |
|---|---|---|
| 1 | ಡಾ. ಕನಕಪ್ಪ ಪೂಜಾರ | ಸಂಯೋಜನಾಧಿಕಾರಿಗಳು |
| 2 | ಸವಿತಾ ಮ ಬಾಗೇವಾಡಿ | DEO |
| 3 | ಪ್ರವೀಣ ಶಾಹಪೂರ | D ದರ್ಜೆ |
ಎನ್.ಎಸ್.ಎಸ್. ಘಟಕಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ನಿಯಮಾನುಸಾರ ನಿರ್ವಹಿಸುವುದು, ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಸಂರಕ್ಷಿಸುವುದು ಹಾಗೂ ನಿಗದಿತ ಅವಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ರಾಜ್ಯ ಎನ್.ಎಸ್.ಎಸ್. ಕೋಶಕ್ಕೆ ವರದಿ/ಮಾಹಿತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ರಾಷ್ಟ್ರೀಯ ಸೇವಾ ಯೋಜನೆ (National Service Scheme – NSS) ಗೆ ಸಂಬಂಧಿಸಿದ ಶಾಸನಗಳು, ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳು ಮುಖ್ಯವಾಗಿ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ “ವಿಶ್ವ ಪರಿಸರ ದಿನಾಚರಣೆ” ಯನ್ನು ಏರ್ಪಡಿಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಕೋಶದ ವತಿಯಿಂದ 10 ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ವಿಶ್ವವಿದ್ಯಾಲಯದ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನದ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್. ಎಸ್. ಎಸ್. ಕೋಶದಿಂದ ಪ್ರಶಸ್ತಿ ಸಮಾರಂಭ ಹಾಗೂ 2024-25 ನೇ ಸಾಲಿನ ಅಧಿಕಾರಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಕ್ರಮ ನಡೆಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶ ಹಾಗೂ ನೆಹರು ಯುವ ಕೇಂದ್ರ ಬೆಳಗಾವಿ ಇವರ ವತಿಯಿಂದ ವಿಕಸಿತ ಭಾರತ ಯುವ ಸಂಸತ್ ಎರಡು ದಿನಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕ/ಸೇವಕಿಯವರಿಗೆ ಜಿಲ್ಲಾ ಮಟ್ಟದ ವಿಕಸಿತ ಭಾರತ ಯುವ ಸಂಸತ್ತು ಸ್ಪರ್ಧೆ ನಡೆಸಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪ್ರಾದೇಶಿಕ ನಿರ್ದೇಶಕರು ಇವರ ಸಹಯೋಗದಲ್ಲಿ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮವನ್ನು ದಿನಾಂಕ 25-03-2025 ಮತ್ತು 26-03-2025 ರವರೆಗೆ ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಹಮ್ಮಿಕೊಳ್ಳಲಾಯಿತು.




ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ದಿನಾಂಕ: 11/02/2025 ರಂದು ಕ್ಷಯರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.



ಜೀವ ಉಳಿಸಲು ಆಂದೋಲನಕ್ಕೆ ಸೇರಿ! ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 14/05/2025 ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.



ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ 2024 ರ ಎನ್.ಎಸ್.ಎಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.



ಕೇಂದ್ರ ಗ್ರಾಮ ಕುಂಬಾರಿಕೆ ಸಂಸ್ಥೆ ಮತ್ತು ಎನ್.ಎಸ್.ಎಸ್ ಸಹಯೋಗದೊಂದಿಗೆ ದಿನಾಂಕ: 04/07/2025 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.








NIC ಗುಜರಾತ್ನಲ್ಲಿ ಒಟ್ಟಾರೆ ಪ್ರದರ್ಶನದಲ್ಲಿ RCUB ತಂಡ ಪ್ರಥಮ ಸ್ಥಾನ ಗಳಿಸಿತು.


ಮಾತೃಭೂಮಿ ಬೆಳ್ಳಿ ಹಬ್ಬ ನಿಮಿತ್ತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸ್ವಯಂಸೇವಕರು ರಾಜ್ಯಮಟ್ಟದ ಅಂತರ ಕಾಲೇಜು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.


ಬೆಳಗಾವಿಯ ಆರ್ಸಿಯು ಕ್ಯಾಂಪಸ್ನಲ್ಲಿ ಹರ್ ಘರ್ ತಿರಂಗಾ.


























| ವಿಳಾಸ: | ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಎನ್. ಎಸ್. ಎಸ್. ಕೋಶ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ. ವಿದ್ಯಾಸಂಗಮ, ರಾಷ್ಟ್ರೀಯ ಹೆದ್ದಾರಿ-04, ಬೆಳಗಾವಿ-591156, ಕರ್ನಾಟಕ. |
|---|---|
| ಟೆಲಿಫೋನ್ ನಂ: | 0831-2565210 |
| ಇ-ಮೇಲ್: | nss@rcub.ac.in |