ಡಾ. ಪರಶುರಾಮ್ ಬನ್ನಿಗಿಡದ್
ನಿರ್ದೇಶಕರು
ಸ್ನಾತಕೋತ್ತರ ಅಧ್ಯಾಯನ ಕೇಂದ್ರ ವಿಜಯಪುರ

ಡಾ.ಫ. ಗು. ಹಳಕಟ್ಟಿ ಸ್ನಾತಕೋತ್ತರ ಅಧ್ಯಾಯನ ಕೇಂದ್ರ ವಿಜಯಪುರ:

         ಅವಿಭಜಿತ ವಿಜಯಪುರ ಜಿಲ್ಲೆಯು ಆದಿಲ್ ಶಾಹಿ ಆಡಳಿತಕ್ಕೆ ಸೇರಿದ ಅನೇಕ ಅದ್ಭುತವಾದ ಇಂಡೋ-ಇಸ್ಲಾಮಿಕ್ ಸ್ಮಾರಕಗಳನ್ನು ಮತ್ತು ವಾಸ್ತುಶಿಲ್ಪದ ವೈಭವವನ್ನು ಸಾರುತ್ತದೆ. ಹೊರವಲಯದ ಕೆಲವು ಕಿ.ಮಿಗಳ ಅಂತರದಲ್ಲಿ ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಐಹೋಳೆ, ಪಟ್ಟದಕಲ್ಲು, ಬದಾಮಿ ಮತ್ತು ಸಂಸ್ಕøತಿಯನ್ನು ಸಾರುವ ಸುಂದರವಾದ ದೇವಾಲಯಗಳಿಂದ ಸುತ್ತುವರೆದಿರುತ್ತದೆ. 1993 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಅಡಿಯಲ್ಲಿ ವೈಭವನ್ನು ಭವ್ಯವಾಗಿ ಸಾರುವ ಈ ನೆಲೆಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಹೆಸರಿಡುವ ಮೂಲಕ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಯಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಣಿ ಚನ್ನಮ್ಮ, ಬೆಳಗಾವಿ ವಿಶ್ವವಿದ್ಯಾಲಯವು ವಿಭಜಿತಗೊಂಡು ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ವ್ಯಾಪ್ತಿಗೆ ಬರುವುದರಿಂದ ಈ ಸ್ನಾತಕೋತ್ತರ ಕೇಂದ್ರವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಭಾಗವಾಗಿ ಮಾರ್ಪಾಡುಗೊಂಡಿತು.


2014-15 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಡಾ.ಫ. ಗು. ಹಳಕಟ್ಟಿ ಸ್ನಾತಕೋತ್ತರ ಅಧ್ಯಾಯನ ಕೇಂದ್ರದಲ್ಲಿ ಗಣಕ ವಿಜ್ಞಾನ ವಿಭಾಗವು ಒರ್ವ ಖಾಯಂ ಪ್ರಾಧ್ಯಾಪಕರು ಮತ್ತು ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸುವ ಮೂಲಕ ಪ್ರಾರಂಭಗೊಂಡಿತು. ಈ ವಿಭಾಗದಿಂದ 2 ವರ್ಷದ MSc(Computer Science) ಪದವಿಗಾಗಿ ಒಟ್ಟು 30 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ (Intake Capacity) ಒದಗಿಸಲಾಗಿದೆ ಹಾಗೂ ಡಾಕ್ಟ್ರಲ್ ಪದವಿಯನ್ನು ಈ ವಿಭಾಗದಡಿಯಲ್ಲಿ ನೀಡಲಾಗುತ್ತಿದೆ. ಗಣಕ ವಿಜ್ಞಾನ ವಿಭಾಗದಲ್ಲಿ ಮೂಲಸೌಕರ್ಯಗಳನ್ನೊಳಗೊಂಡ ಮತ್ತು ಸುಸಜ್ಜಿತವಾದ ಪ್ರಯೋಗಾಲಯದ ವ್ಯವಸ್ಥೆ ಇದೆ. ಪ್ರಯೋಗಾಲಯವು 20 ಅತ್ಯಾದುನಿಕ ಆವಿಷ್ಕಾರ ಸಂರಚನಾ ( State-of-the-art configuration) ಗಣಕ ಯಂತ್ರಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ 10 MBPS Broadband ಅಂತರ್ ಜಾಲದ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗಾಗಿ ಒದಗಿಸಲಾಗಿದೆ. 4 ಜನ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು ಮತ್ತು ಒರ್ವ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಅವರ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಶ್ರಮಿಸುತ್ತಿದ್ದಾರೆ.


Vision :


The University will be a self-benchmark of academic excellence, disseminating and advancing knowledge in globalized world, where convergence of inter-disciplinary studies and research emerges to create a pool of world-class Human Resource to serve for the well-being of all the sections of the society.


Mission :


• By imparting innovative and quality education of global standards and produce skilled human resources.
• By fostering educational programmes in various disciplines including inter-disciplinary based on interaction with society and industry.
• By designing co-curricular activities to develop the holistic personality of the students and to blend professionalism with ethics to enable students to face the challenges of contemporary society, in particular to meet the local needs.
Top