Hide Main content block

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುರಿತು

ವಿಶ್ವವಿದ್ಯಾಲಯದಕುರಿತು: ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯವೆನ್ನುವ ಅಭಿದಾನಕ್ಕೆ ಪಾತ್ರವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ಥಾಪನೆಯಾದದ್ದು 2010 ರಲ್ಲಿಅದಕ್ಕೂ ಮೊದಲ ಕರ್ನಾಟಕ ವಿಶ್ವವಿದ್ಯಾಲಯದ ಕಿತ್ತೂರು ರಾಣಿಚನ್ನಮ್ಮ ಸ್ನಾತಕೋತ್ತರ ಕೇಂದ್ರವಾಗಿ 1982ರಲ್ಲಿ ರೂಪುಗೊಂಡಿತ್ತು. ಉತ್ತರ ಕರ್ನಾಟಕದ ಉನ್ನತ ಶಿಕ್ಷಣದ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುವ ಸದುದ್ದೇಶದಿಂದ ಆರಂಭವಾದ ಕೇಂದ್ರವು 1994ರಲ್ಲಿ ಭೂತರಾಮನಹಟ್ಟಿಯ 172 ಎಕರೆ ಪ್ರದೇಶದಲ್ಲಿತನ್ನ ಭೌತಿಕ ಅಸ್ತಿತ್ವವನ್ನು ಪಡೆದುಕೊಂಡಿತು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬಳಿಯಲ್ಲಿ ಬೆಳಗಾವಿಯಿಂದ 18 ಕಿ.ಮೀ ಅಂತರದಲ್ಲಿ ನಿಸರ್ಗದ ಮಡಿಲಲ್ಲಿ ವಿಶ್ವವಿದ್ಯಾಲಯವು ನೆಲೆಯೂರಿದೆ. 2010ರಲ್ಲಿ ಕರ್ನಾಟಕರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿರಿಸಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರಕೇಂದ್ರವನ್ನು ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಘೋಷಿಸಿತು.ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನೊಳಗೊಂಡ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಕರ್ನಾಟಕದ ಅತಿ ಮಹತ್ವದ ಹಾಗೂ ಬಹುದೊಡ್ಡ ವಿಶ್ವವಿದ್ಯಾಲಯವಾಗಿ ಇಂದು ರೂಪ ಪಡೆದುಕೊಂಡಿತು.
ಶೈಕ್ಷಣಿಕ ಕಾರ್ಯಕ್ರಮಗಳು :
ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಒಂಬತ್ತು ನಿಕಾಯಗಳನ್ನು ಹೊಂದಿದ್ದು, ಅದರಅಡಿಯಲ್ಲಿ ಹತ್ತೊಂಬತ್ತು ಸ್ನಾತಕೋತ್ತರ ವಿಭಾಗಗಳು ನಡೆಯುತ್ತಿವೆ. ಸ್ನಾತಕೋತ್ತರ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮಾ ಅಧ್ಯಯನ ಮತ್ತು ಪಿಎಚ್.ಡಿಅಧ್ಯಯನ ಕೋರ್ಸಗಳು ನಡೆಯುತ್ತಿವೆ. ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾಚಟುವಟಿಕೆಗಳಲ್ಲಿ ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳು ತಮ್ಮನ್ನು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಿವೆ. ಯೋಜನಾ ಬದ್ಧ ಹಾಗೂ ಶಿಸ್ತು ಬದ್ಧ ಶೈಕ್ಷಣಿಕ ವ್ಯವಸ್ಥೆ,ಅತ್ಯುತ್ತಮ ಆಡಳಿತಾತ್ಮಕ ಉಪಕ್ರಮಗಳು, ಸಮರ್ಥಗ್ರಂಥಾಲಯ ಹಾಗೂ ಸುಸಜ್ಜಿತ ಪ್ರಯೋಗಾಲಯಗಳು ಅಲ್ಲದೇ ಮಾಹಿತಿತಂತ್ರಜ್ಞಾನದ ಬಗೆಗಿನ ಉನ್ನತಾಧ್ಯಯನಗಳಿಗೆ ಅಗತ್ಯವಿರುವ ಪ್ರಯೋಗಾಲಯಗಳನ್ನು ವಿಶ್ವವಿದ್ಯಾಲಯವು ಹೊಂದಿದೆ. ಜಾಗತೀಕರಣೋತ್ತರ ಸಂದರ್ಭಕ್ಕೆ ಅಗತ್ಯವಿರುವ ಅತ್ಯಾಧುನಿಕ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿ ಸ್ನೇಹಿ ಪರಿಸರವನ್ನು ಆವರಣದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕವನ್ನು ಹೊಂದಲಾಗಿದೆ ಮೂಲಭೂತಸೌಕರ್ಯಗಳನ್ನು ಅಲ್ಲದೇಉಚಿತ ವೈ-ಫೈ (ಇಂಟರನೆಟ್)ವ್ಯವಸ್ಥೆಯನ್ನುಕಲ್ಪಿಸಲಾಗಿದೆ. ಆವರಣದಲ್ಲಿ ಬ್ಯಾಂಕ್, ಅಂಚೆಕಛೇರಿ, ಸೈಬರ್‍ಕೆಫೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗಿದೆ.

ಕುಲಪತಿಗಳ ಮಾತು :
ಜಾಗತಿಕಗುಣಮಟ್ಟದ ಹೊಸ ಶೈಕ್ಷಣಿಕ ಸಾಧ್ಯತೆಗಳ ರಚನಾತ್ಮಕ ವಿನ್ಯಾಸಕ್ಕೆ ವಿಶ್ವವಿದ್ಯಾಲಯವುಕಟಿಬದ್ದವಾಗಿ ನಿಂತಿದೆ. ಅತ್ಯುತ್ತಮ ನಿಸರ್ಗ, ಪರಮೋಚ್ಛಜ್ಞಾನಸನ್ನಿಧಾನ, ವಿದ್ಯಾರ್ಥಿಸ್ನೇಹಿ ಪರಿಸರ ನಮ್ಮ ವಿಶ್ವವಿದ್ಯಾಲಯದ ಗುಣವಿಶೇಷಣಗಳು. ನಾಡಿನಅತಿದೊಡ್ಡ ವಿಶ್ವವಿದ್ಯಾಲಯದ ಶೈಕ್ಷಣಿಕ ವ್ಯವಸ್ಥೆಯನ್ನುಒದಗಿಸುತ್ತಿರುವ ಸೇವಾಸಮರ್ಪಣಾ ಮನೋಭಾವದ ದಿವ್ಯಸನ್ನಿಧಾನವೇರಾಣಿಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಸಂಗಮಆವರಣ. ‘ವಿದ್ವಾನ್ ಸರ್ವತ್ರ್ರ ಪೂಜ್ಯತೆ’ಇದು ನಮ್ಮಧ್ಯೇಯ ಮಂತ್ರ. ಜ್ಞಾನ ಮತ್ತು ಸೇವೆಯ ಮೂಲಕ ರಾಷ್ಟ್ರ ನಿರ್ಮಾಣವು ನಮ್ಮ ಮಹತ್ವದಕನಸು. ಅದಕ್ಕಾಗಿಸಾತತ್ಯ ಹಂಬಲ ನಮ್ಮದು...... ವಂದನೆಗಳೊಂದಿಗೆ


Top