ಶಿಕ್ಷಣಶಾಸ್ತ್ರ ವಿಭಾಗ (ಎಂ.ಇಡಿ)

ವಿಭಾಗದ ಕುರಿತು:

ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಕುತೂಹಲವನ್ನು ಜಾಗೃತಗೊಳಿಸುತ್ತಾರೆ ಎಂದು ನಾವು ನಂಬುತ್ತೇವೆ.ಶಿಕ್ಷಕರು ಶಿಕ್ಷಣದಲ್ಲಿರುವ ಸವಾಲುಗಳನ್ನು ಶಿಕ್ಷಣದಿಂದಲೇ ಜಯ ಸಾಧಿಸಲು ಸಮರ್ಥರಾಗಿಸುವುದು. ನಮ್ಮ ಶಾಲೆಯು ಬೋಧನೆ ಮತ್ತು ಕಲಿಕೆಯ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತ ಸೃಜನಾತ್ಮಕ ಶಿಕ್ಷಕರನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಶಿಕ್ಷಕರ ಸಾಮರ್ಥ್ಯ, ನೈಪುಣ್ಯತೆಗಳು ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುತ್ತದೆ.ನಾವು ನಿಜವಾದ ಶಿಕ್ಷಕರನ್ನು ಅವರ ಕೌಶಲಗಳು ಮತ್ತು ಅನುಭವಕ್ಕೆ ಹೊಂದುವ ಹಾಗೆ ರೂಪಿಸುತ್ತೇವೆ.

ಧ್ಯಯೋದ್ದೇಶ:

ಶಿಕ್ಷಣದಲ್ಲಿನ ಅವಕಾಶಗಳ ಅಭಿವೃದ್ಧಿ, ಸಮಾಲೋಚನೆ ಮತ್ತು ಸಂಶೋಧನೆಗಳನ್ನು ವಿನ್ಯಾಸಗೊಳಿಸಲು ಸಾಮರ್ಥ್ಯ ಹೊಂದಿರುವ, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಶಿಕ್ಷಣ ಇಲಾಖೆ ಯಾಗಿ ಹೊರಹೊಮ್ಮಲು ಮತ್ತು ಖಚಿತವಾದ ಅಧ್ಯಯನಗಳು ಮತ್ತು ವಿಸ್ತರಣೆ ಗಳಿಗೆ ಗುಣಮಟ್ಟವನ್ನು ನೀಡುವುದಾಗಿದೆ

ಗುರಿ:

1. ಸೂಚನೆ: ಬೋಧನೆಯು ನವೀನ ವಿಧಾನಗಳನ್ನು ಬಳಸಿಕೊಂಡು ಮಾಹಿತಿಯನ್ನು ಒದಗಿಸುವುದು.
2. ಪಠ್ಯಕ್ರಮ : ಶಿಕ್ಷಕರ ಶಿಕ್ಷಣದಲ್ಲಿ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಜ್ಞಾನವನ್ನು ನೀಡುವುದರೊಂದಿಗೆ ಜಾಗತಿಕವಾಗಿ ಸ್ವೀಕಾರ ವಾದ ಆಂತರಿಕ ಶಿಕ್ಷಣವನ್ನು ಅಭಿವೃದ್ಧಿಪಡಿಸುವುದು.
3. ವಿದ್ಯಾರ್ಥಿಗಳು : ರಾಷ್ಟ್ರದ ಭವಿಷ್ಯದ ಭವಿಷ್ಯವನ್ನು ರೂಪಿಸುವವರು ಮತ್ತು ಇವರು ಅತ್ಯಂತ ಸಮರ್ಥ ಮತ್ತು ಸೂಕ್ತ ಮಾನವ ಸಂಪನ್ಮೂಲವನ್ನು ಬಿಂಬಿಸುವವರು.
4. ಸಿಬ್ಬಂದಿ: ಪಠ್ಯಕ್ರಮವನ್ನು ಸಾಗಿಸಲು ಬಳಸುವ ಮಾನವ ಸಂಪನ್ಮೂಲ ಹಾಗೂ ಎಲ್ಲಾ ಪಾಲುದಾರರಿಗೆ ಸಂಪನ್ಮೂಲವಾಗಿ ಸುಖವಾಗಿ ಅಗತ್ಯವಾದ ಘೋಷಣೆಯನ್ನು ನೀಡುವವರು.
5. ಮೂಲಸೌಕರ್ಯ: ಶಾಲೆಯ ಎಲ್ಲ ಮೂಲ ಸೌಕರ್ಯಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸುವುದು.
6.ನಿರ್ವಹಣೆ: ಇಲಾಖೆಯು ಎಲ್ಲ ಪಾಲುದಾರರಿಗೆ ಸಂಪನ್ಮೂಲವಾಗಿ ಮತ್ತು ಸೃಜನಾತ್ಮಕವಾಗಿ ಅಗತ್ಯವಾದ ಪೋಷಣೆಯ ಬೆಂಬಲವನ್ನು ಒದಗಿಸುತ್ತದೆ.

ಘನೋದ್ದೇಶ:

1. ಶಿಕ್ಷಕರ ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸಲು.
2. ಶಿಕ್ಷಣದ ವಿವಿಧ ಹಂತಗಳಲ್ಲಿ ಪೂರ್ವ ಸೇವೆ ಮತ್ತು ಸೇವೆಯಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಲು.
3. ಪ್ರಕಟಣೆ, ವಿಸ್ತರಣೆ, ಅಧ್ಯಯನಗಳನ್ನು ನಡೆಸುವುದರ ಮೂಲಕ ಭಾರತಾದ್ಯಾಂತ ನಡೆಯುವ ವಿವಿಧ ಸಂಸ್ಥೆಯ ನವೀನತೆ ಗಳನ್ನು ಸ್ಥಾಪಿಸುವುದು.
4. ಕಾರ್ಯಾಗಾರ, ಸೆಮಿನಾರುಗಳು ಗುಣಮಟ್ಟತೆ ನವೀನ ಸಂಶೋಧನ ಮಾದರಿಗಳನ್ನು ಉತ್ತೇಜಿಸುವುದು. ಶಿಕ್ಷಣದ ಆಯ್ದ ಪ್ರದೇಶಗಳಲ್ಲಿ ಸಂಶೋಧನೆ ಅಧ್ಯಯನಗಳನ್ನು ,ಮಾರ್ಗದರ್ಶನ ಮಾಡುವುದು, ಸಹ ಯೋಗಿಸುವುದು .
5. ಜ್ಞಾನವನ್ನು ಹೊಂದಿದ ಸಮಾಜದಲ್ಲಿ ಶಿಕ್ಷಣದ ಉದಯೋನ್ಮುಖ ಪ್ರವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿಕ್ಷಣ ತಜ್ಞರಿಂದ ಅರಿವು ಮೂಡಿಸುವುದು.


Top