Hide Main content block

ಸಂಯೋಜನಾ ಪ್ರಕ್ರಿಯೆ ಮಾರ್ಗಸೂಚಿಗಳು ಮತ್ತು ನಿಯಮಗಳು


01 ಮಹಾವಿದ್ಯಾಲಯ ಸ್ಥಗಿತಗೊಳಿಸಲು ಸಂಬಂಧಿಸಿದ ಮನವಿ ಪತ್ರ
02 ಆಡಳಿತ ಮಂಡಳಿ ಠರಾವು ಪತ್ರ. (ಅದರಲ್ಲಿ ಮಹಾವಿದ್ಯಾಲಯ ಸ್ಥಗಿತಗೊಳಿಸಲು ಸ್ಪಷ್ಟವಾದ ಕಾರಣ ನಮೂದಿಸಿರಬೇಕು)
03 ಮಹಾವಿದ್ಯಾಲಯ ಪ್ರಾರಂಭಿಸಲು ಸರಕಾರದಿಂದ ಮಂಜೂರಾತಿಯಾದ ದೃಢಿಕೃತ ಪತ್ರ.
04 ವಿಶ್ವವಿದ್ಯಾಲಯದಿಂದ ಪ್ರಾರಂಭದಲ್ಲಿ ಹಾಗೂ ಇತ್ತಿಚಿಗೆ ಪಡೆದ ಅಧಿಸೂಚನೆ ಪ್ರತಿ.
05 ಕೋರ್ಸಗಳನ್ನು ಸ್ಥಗಿತಗೊಳಿಸುವ ಸಂರ್ದಭದಲ್ಲಿ ಭರಿಸಿದ ಠೇವಣಿ ಶುಲ್ಕದ ವಿವರ
06 ಮಹಾವಿದ್ಯಾಲಯ ಸ್ಥಗಿತಗೊಳಿಸಲು ರೂ.10,000/- ಶುಲ್ಕವನ್ನು ಸಿ.ಡಿ.ಸಿ ವಿಭಾಗದ ಖಾತೆ ಸಂಖ್ಯೆ:05522200017220 (IFS Code No. SYNB0000552) ಗೆ ಭರಿಸಿದ ವಿಶ್ವವಿದ್ಯಾಲಯದ ರಶೀದಿ/ಚಲನ್ ಪ್ರತಿ/ಡಿ.ಡಿ. (ಚಲನ್ ಪ್ರತಿಯನ್ನು ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.)
07 ಮಹಾವಿದ್ಯಾಲಯದವರು, ಮಹಾವಿದ್ಯಾಲಯದಲ್ಲಿ ಪ್ರಸಕ್ತ ಹಾಗೂ ಹಿಂದಿನ ಶೈಕ್ಷಣಿಕ ಸಾಲಿಗೆ ಯಾವುದೆ ವಿದ್ಯಾರ್ಥಿಗಳು ಪ್ರವೇಶಾತಿ ಹಾಗೂ ಅನುತ್ತೀರ್ಣವಾದ ವಿದ್ಯಾರ್ಥಿಗಳ ಬಗ್ಗೆ ಹಾಗೂ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಕುರಿತಾಗಿ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗದಂತೆ ಆಡಳಿತ ಮಂಡಳಿಯವರು ಕೈಗೊಂಡಿರುವ ಕ್ರಮದ ಬಗ್ಗೆ ಮುಚ್ಚಳಿಕೆ ಪತ್ರ ನೀಡುವುದು (ರೂ.200/- ಛಾಪಾ ಕಾಗದದ ಮೇಲೆ)
08 ಮಹಾವಿದ್ಯಾಲಯದವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತ ವಿಭಾಗ ಮತ್ತು ಪರೀಕ್ಷಾ ವಿಭಾಗದಿಂದ ನಿರಪೇಕ್ಷಣಾ ಮತ್ತು ಬೇ-ಬಾಕಿ ಪ್ರಮಾಣ ಪತ್ರ.
09 ಇತರೆ ದಾಖಲಾತಿಗಳು: 1. ಹಿಂದಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡುವ ಕುರಿತಾಗಿ ತಗೆದುಕೊಡಿರುವ ಕ್ರಮ ಮತ್ತು ಇತರೆ
ಮೇಲ್ಕಾಣಿಸಿದ ಎಲ್ಲ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು.

01 ಮಹಾವಿದ್ಯಾಲಯದ ಹೆಸರು ಬದಲಾವಣೆಗೆ/ವೀಲಿನಗೊಳಿಸುವುದಕ್ಕೆ ಸಂಬಂಧಿಸಿದ ಮನವಿ ಪತ್ರ. (ಮಹಾವಿದ್ಯಾಲಯದ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು.)
02 ಮಹಾವಿದ್ಯಾಲಯ ಪ್ರಾರಂಭಿಸಲು ಸರಕಾರದಿಂದ ಪಡೆದ ಮಂಜೂರಾತಿಯ ಆದೇಶದ ದೃಢಿಕೃತ ಪತ್ರ.
03 ಮಹಾವಿದ್ಯಾಲಯವನ್ನು ಪ್ರಾರಂಭಿಸುವ ಸಂದಂರ್ಭದಲ್ಲಿ ಹಾಗೂ ಇತ್ತೀಚಿಗೆ ವಿಶ್ವವಿದ್ಯಾಲಯದಿಂದ ಪಡೆದ ಸಂಯೋಜನಾ ಅಧಿಸೂಚನೆ ಪ್ರತಿ.
04 AICTE / NCTE ಇವರಿಂದ ಹೆಸರು ಬದಲಾವಣೆಗೆ/ವೀಲಿನಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಂಜೂರಾತಿ ಪಡೆದ ಆದೇಶದ ಪ್ರತಿ (ಅನ್ವಯಿಸಿದಲ್ಲಿ ಮಾತ್ರ) *JgÀqÀÄ DzÉñÀUÀ¼ÀÄ NCTE
05 ಹೆಸರು ಬದಲಾವಣೆಗೆ/ವೀಲಿನಗೊಳಿಸುವುದಕ್ಕೆ ಸಂಬಂಧಿಸಿದ ಹಣ ರೂ.25,300/- ಶುಲ್ಕವನ್ನು ಸಿ.ಡಿ.ಸಿ ವಿಭಾಗದ ಖಾತೆ ಸಂಖ್ಯೆ:05522200017220 (IFS Code No. SYNB0000552) ಗೆ ಭರಿಸಿದ ವಿಶ್ವವಿದ್ಯಾಲಯದ ರಶೀದಿ/ ಚಲನ್ ಪ್ರತಿ/ ಡಿ.ಡಿ. (ಹೆಸರು ಬದಲಾವಣೆಗೆ ಮತ್ತು ವೀಲಿನಗೊಳಿಸುವುದಕ್ಕೆ ಪ್ರತ್ಯೆಕವಾಗಿ ಶುಲ್ಕ ಭರಿಸಬೇಕು.) (ಚಲನ್ ಪ್ರತಿಯನ್ನು ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.)
06 1. ಆಡಳಿತ ಮಂಡಳಿ ಠರಾವು ಪತ್ರ, ಠರಾವ ಪ್ರತಿಯಲ್ಲಿ ಮಹಾವಿದ್ಯಾಲಯದ ಹೆಸರು ಬದಲಾವಣೆ/ವೀಲಿನಗೊಳಿಸುವುದರ ಕುರಿತು ಸ್ಪಷ್ಟವಾಗಿ ನಮೂದಿಸಿರಬೇಕು.
2. ವೀಲಿನಗೊಳೀಸುವುದರ ಜೊತೆಗೆ ಹೆಸರು ಬದಲಾವಣೆ ಮಾಡಬೇಕಾಗಿದ್ದಲ್ಲಿ ಆಡಳಿತ ಮಂಡಳಿ ಠರಾವು ಪತ್ರದಲ್ಲಿ ಹೆಸರು ಬದಲಾವಣೆಯ ಕುರಿತಾಗಿ ಸ್ಪಷ್ಟವಾಗಿ ನಮೂದಿಸಿರಬೇಕು.
07 ವೀಲಿನಗೊಳ್ಳುವ ಕೋರ್ಸಗಳಿಗೆ ಸಂಬಂಧಿಸಿದಂತೆ ಮೂಲಭೂತ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಹೊಂದಿರುವ ಕುರಿತಾದ ದಾಖಲೆಗಳನ್ನು ಲಗತ್ತಿಸಿರಬೇಕು. (ಕಟ್ಟಡ, ಬೋಧನಾ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯ, ವಿವಿಧ ಬಗೆಯ ಕಚೇರಿಗಳು, ವಿವಿಧ ಬಗೆಯ ಘಟಕಗಳು, ಶೌಚಾಲಯ, ಮಹಿಳಿಯರಿಗೆ ಪ್ರತ್ಯೆಕವಾಗಿ ಅವಶ್ಯಕತೆ ಇರುವ ಸೌಲಭ್ಯ ಇತ್ಯಾದಿ.)
08 ಇತರೆ ದಾಖಲಾತಿಗಳು.
ಮೇಲ್ಕಾಣಿಸಿದ ಎಲ್ಲ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು.

01 ಆಡಳಿತ ಮಂಡಳಿ ಬದಲಾವಣೆ ಮಾಡುವುದಕ್ಕಾಗಿ ಸಂಬಂಧಿಸಿದ ಮನವಿ ಪತ್ರ. (ಎರಡು ಆಡಳಿತ ಮಂಡಳಿತ ಮಂಡಳಿಯವರು)
02 ಮಹಾವಿದ್ಯಾಲಯ ಪ್ರಾರಂಭಿಸಲು ಸರಕಾರದಿಂದ ಮಂಜೂರಾತಿಯಾದ ಆದೇಶದ ದೃಢಿಕೃತ ಪತ್ರ.
03 ಮಹಾವಿದ್ಯಾಲಯವನ್ನು ಪ್ರಾರಂಭಿಸುವ ಸಂದಂರ್ಭದಲ್ಲಿ ಹಾಗೂ ಇತ್ತೀಚಿಗೆ ವಿಶ್ವವಿದ್ಯಾಲಯದಿಂದ ಪಡೆದ ಸಂಯೋಜನಾ ಅಧಿಸೂಚನೆ ಪ್ರತಿ.
04 AICTE / NCTE ಇವರಿಂದ ಸ್ಥಳಾಂತರಕ್ಕೆ ಸಂಬಂಧಿಸಿದ ಅನುಮೋದನೆ ಪಡೆದ ಪತ್ರ (ಅನ್ವಯಿಸಿದಲ್ಲಿ ಮಾತ್ರ)
05 ಆಡಳಿತ ಮಂಡಳಿ ಠರಾವು ಪತ್ರ (ಎರಡು ಆಡಳಿತ ಮಂಡಳಿತ ಮಂಡಳಿಯವರು)
06 ಎರಡು ಆಡಳಿತ ಮಂಡಳಿಯವರು ರೂ.35,200/- ರಂತೆ ಶುಲ್ಕವನ್ನು ಪ್ರತ್ಯೇಕವಾಗಿ ಸಿ.ಡಿ.ಸಿ ವಿಭಾಗದ ಖಾತೆ ಸಂಖ್ಯೆ:05522200017220 (IFS Code No. SYNB0000552) ಗೆ ಭರಿಸಿದ ವಿಶ್ವವಿದ್ಯಾಲಯದ ರಶೀದಿ/ಚಲನ್ ಪ್ರತಿ.

• ಮಹಾವಿದ್ಯಾಲಯವನ್ನು ಸ್ಥಳಾಂತರ ಮಾಡಬೇಕಾಗಿದ್ದಲ್ಲಿ, ಸ್ಥಳಾಂತರಕ್ಕೆ ಸಂಬಂಧಿಸಿದ ಶುಲ್ಕ ರೂ.48,400/ಗಳನ್ನು ಪ್ರತ್ಯೆಕವಾಗಿ ಭರಿಸಬೇಕು.

07 ಇತರೆ ದಾಖಲಾತಿಗಳು

• ಎರಡೂ ಆಡಳಿತ ಮಂಡಳಿಯವರ ನೊಂದಣಿ ಪ್ರಮಾಣ ಪತ್ರ ಮತ್ತು ಬೈಲಾ.
• ಅಡಿಟ್ ರೀಪೋರ್ಟ (ಬದಲಾವಣೆಗೊಳ್ಳುತ್ತಿರುವ ಆಡಳಿತ ಮಂಡಳಿಯವರಿಂದ)
• ಆಡಳಿತ ಮಂಡಳಿಯ ಸದಸ್ಯರ ಪಟ್ಟಿ.
• ಬದಲಾವಣೆಗೊಳ್ಳುವ ಆಡಳಿತ ಮಂಡಳಿ ಹೆಸರಿನ ಮೇಲಿರುವ ಪ್ರಸ್ತುತ ದಿನಾಂಕದ ಬ್ಯಾಂಕ ಖಾತೆಯಲ್ಲಿಯ ಶಿಲ್ಕಿನ ಪ್ರಮಾಣ ಪತ್ರ.

• ಸಂಘ/ಸಂಸ್ಥೆಯು ಯಾವ ವರ್ಗಕ್ಕೆ ಸೇರಿದ್ದರ ಬಗ್ಗೆ ದಾಖಲೆ.
• ಸಂಘ/ಸಂಸ್ಥೆಯು ಹಿಂದಿನ ವರ್ಷದ ಲೆಕ್ಕ ಪತ್ರದ ಅಡಾವಡೆ (Balance Sheet/Audit Report) ಪತ್ರಿಕೆ.
• ಹೊಸ ಆಡಳಿತ ಮಂಡಳಿಯ, ಮಹಾವಿದ್ಯಾಲಯಕ್ಕೆ ಸಂಬಂಧಿಸಿದ ಮೂಲಭೂತ ಶೈಕ್ಷಣಿಕ ಸೌಲಭ್ಯಗಳ ವಿವರ. (ಭೂಮಿಯ ವಿವರ, ಕಟ್ಟಡ, ಬೋಧನಾ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯ, ವಿವಿಧ ಬಗೆಯ ಕಚೇರಿಗಳು, ವಿವಿಧ ಬಗೆಯ ಘಟಕಗಳು, ಶೌಚಾಲಯ, ಮಹಿಳಿಯರಿಗೆ ಪ್ರತ್ಯೆಕವಾಗಿ ಅವಶ್ಯಕತೆ ಇರುವ ಸೌಲಭ್ಯ ಇತ್ಯಾದಿ.)
• ಆಡಳಿತ ಮಂಡಳಿ ಅಥವಾ ಮಹಾವಿದ್ಯಾಲಯದ ಕುರಿತಾಗಿ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ಅದರ ವಿವರ.
• ಬದಲಾವಣೆ ಮಾಡಿತ್ತಿರುವ ಆಡಳಿತ ಮಂಡಳಿಯವರು, ಮಹಾವಿದ್ಯಾಲಯವನ್ನು ಹೊಸ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಲು ಒಪ್ಪಿಗೆ ಇರುವುದಾಗಿ ರೂ.200/-ಗಳ ಛಾಪಾಕಾಗದದ ಮೇಲೆ ಮುದ್ರಣ ಮಾಡಿ ನೀಡುವುದು. (ನೋಟರಿ ಮಾಡಿ ನೀಡುವುದು)
• ಹೊಸ ಆಡಳಿತ ಮಂಡಳಿಯವರು ಮಹಾವಿದ್ಯಾಲಯವನ್ನು ಹಸ್ತಾಂತರಿಸಿಕೊಳ್ಳಲು ಒಪ್ಪಿಗೆ ಇರುವುದಾಗಿ ರೂ.200/-ಗಳ ಛಾಪಾಕಾಗದದ ಮೇಲೆ ಮುದ್ರಣ ಮಾಡಿ ನೀಡುವುದು. (ನೋಟರಿ ಮಾಡಿ ನೀಡುವುದು)
08 ಹೊಸ ಆಡಳಿತ ಮಂಡಳಿಯವರು ಕೋರ್ಸಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಮೂಲಭೂತ ಮತ್ತು ಶೈಕ್ಷಣಿಕ ಸೌಲಭ್ಯಗಳ ದಾಖಲೆಗಳನ್ನು ಲಗತ್ತಿಸಿರಬೇಕು.
ಮೇಲ್ಕಾಣಿಸಿದ ಎಲ್ಲ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು.

01 ಮಹಾವಿದ್ಯಾಲಯವನ್ನು ಸ್ಥಳಾಂತರಕ್ಕೆ ಸಂಬಂಧಿಸಿದ ಮನವಿ ಪತ್ರ.
02 ಮಹಾವಿದ್ಯಾಲಯ ಪ್ರಾರಂಭಿಸಲು ಸರಕಾರದಿಂದ ಮಂಜೂರಾತಿಯಾದ ದೃಢಿಕೃತ ಪತ್ರ.
03 ಮಹಾವಿದ್ಯಾಲಯವನ್ನು ಪ್ರಾರಂಭಿಸುವ ಸಂದಂರ್ಭದಲ್ಲಿ ಹಾಗೂ ಇತ್ತೀಚಿಗೆ ವಿಶ್ವವಿದ್ಯಾಲಯದಿಂದ ಪಡೆದ ಸಂಯೋಜನಾ ಅಧಿಸೂಚನೆ ಪ್ರತಿ.
04 AICTE / NCTE ಇವರಿಂದ ಸ್ಥಳಾಂತರಕ್ಕೆ ಸಂಬಂಧಿಸಿದ ಅನುಮೋದನೆ ಪಡೆದ ಪತ್ರ (ಅನ್ವಯಿಸಿದಲ್ಲಿ ಮಾತ್ರ)
05 ಸ್ಥಳಾಂತರಕ್ಕೆ 48,400/- ಶುಲ್ಕವನ್ನು ಸಿ.ಡಿ.ಸಿ ವಿಭಾಗದ ಖಾತೆ ಸಂಖ್ಯೆ:05522200017220 (IFS Code No. SYNB0000552) ಗೆ ಭರಿಸಿದ ವಿಶ್ವವಿದ್ಯಾಲಯದ ರಶೀದಿ/ಚಲನ್ ಪ್ರತಿ.
06 ಆಡಳಿತ ಮಂಡಳಿ ಠರಾವು ಪತ್ರ.
07 ಸ್ಥಳಾಂತರಗೊಳ್ಳುವ ಮಹಾವಿದ್ಯಾಲಯದ ಸ್ಥಳದಿಂದ 15 ಕಿ. ಮೀ. ವ್ಯಾಪ್ತಿಯಲ್ಲಿ ಬರುವ ಬೇರೆ ಪದವಿ ಮಹಾವಿದ್ಯಾಲಯಗಳ ವಿವರ.
08 ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಕುಡಿಯುವ ನೀರಿನ ಸೌಲಭ್ಯ, ವಿವಿಧ ಬಗೆಯ ಕಚೇರಿಗಳು, ವಿವಿಧ ಬಗೆಯ ಘಟಕಗಳು, ಶೌಚಾಲಯ, ಮಹಿಳಿಯರಿಗೆ ಪ್ರತ್ಯೆಕವಾಗಿ ಅವಶ್ಯಕತೆ ಇರುವ ಸೌಲಭ್ಯ ಇತ್ಯಾದಿಗಳ ಕುರಿತಾದ ವಿವರಗಳು ಮತ್ತು ಭಾವಚಿತ್ರ.
09 ಸ್ಥಳಾಂತರಕ್ಕೆ ಸಂಬಂಧಿಸಿದ ಲಗತ್ತಿಸಬೇಕಾದ ದಢಿಕೃತ ದಾಖಲೆಗಳು:

1. ಭೂಮಿ ಅಥವಾ ಕಟ್ಟಡ ಖರೀದಿ / ಬಾಡಿಗೆ / ಗುತ್ತಿಗೆ ಪಡೆದ ನೊಂದಾಯಿತ ದಾಖಲೆ ಪತ್ರ.
2. ಭೂಮಿಯ ಉತಾರ ಪ್ರತಿ.
3. ಕಟ್ಟಡ ನೀಲ ನಕ್ಷೆ ಪ್ರತಿ.
4. ಕಟ್ಟಡ ಪೂರ್ಣಗೊಂಡಿರುವ ಪ್ರಮಾಣ ಪತ್ರ.
5. ಭೂಮಿ ಕಟ್ಟಡ ಬಳಕೆ ಪ್ರಮಾಣ ಪತ್ರ.
6. ಪ್ರಾಪರ್ಟಿ ರಜಿಸ್ಟರ್ ಕಾರ್ಡಿನ ನಕಲು ಪ್ರತಿ.
7. ವಿವಿಧ ಬಗೆಯ ಕಚೇರಿ/ಬೋಧನಾ ಕೊಠಡಿಗಳ ಅಳತೆಯ ವಿವರ.
8. ಮಹಾವಿದ್ಯಾಲಯದ ಇನ್ನಿತರ ವಿವಿಧ ಬಗೆಯ ವಿವರ/ಭಾವಚಿತ್ರಗಳು.
09 ಇತರೆ ದಾಖಲೆಗಳು
ಮೇಲ್ಕಾಣಿಸಿದ ಎಲ್ಲ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕು.

ಸಂಯೋಜನಾ ಪ್ರಕ್ರಿಯೆ ಮಾರ್ಗಸೂಚಿಗಳು ಮತ್ತು ನಿಯಮಗಳು

KSU Act-2000_Chapter-10_ AFFILIATION OF COLLEGES AND RECOGNITION OF INSTITUTIONS       (CLICK TO KNOW)
Top