ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ವಿಭಾಗದ ಕುರಿತು:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ಆರಂಭಿಸುವುದು ಬಹು ದಿನದ ಕನಸ್ಸಾಗಿತ್ತು. ಇದು 2016 ರಲ್ಲಿ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಿಗೆ ಸಮೂಹ ಸಂವಹನ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳುವ ಅನುಕೂಲಕ್ಕಾಗಿ ಈ ವಿಭಾಗವನ್ನು ಸ್ಥಾಪಿಸಲಾಯಿತು.



ಧ್ಯಯೋದ್ದೇಶ:


ಸಮೂಹ ಮಾಧ್ಯಮ ವೃತ್ತಿಯ ಸದ್ಭಳಕೆಗೆ ವಿಡಿಯೋ, ಆಡಿಯೋ, ಸುದ್ದಿ ಮತ್ತು ಛಾಯಾಚಿತ್ರಗಳ ಸಂಪಾದನೆಯ ಕೌಶಲಗಳನ್ನು ಹೊಂದಿ, ಸೃಜನಾತ್ಮಕ ಬರವಣಿಗೆಯ ತಂತ್ರಗಾರಿಕೆಯೊಂದಿಗೆ ಚೈತನ್ಯದ ವ್ಯಕ್ತಿತ್ವದಿಂದ ಸಮಾಜಕ್ಕೆ ಸೇವೆ ಒದಗಿಸುವ ದೃಷ್ಠಿಕೋನ ಹೊಂದಿದೆ. ಸಮೂಹ ಮಾಧ್ಯಮದ ಉದ್ದಿಮೆಯು ತೀವ್ರ ಪೈಪೋಟಿಯಿಂದ ವ್ಯಾಪಕಗೊಂಡಿದ್ದು, ಭಾರತೀಯ ಪತ್ರಿಕೋದ್ಯಮಕ್ಕೆ ಪ್ರಾಶಸ್ತ್ಯ ನೀಡುವುದರೊಂದಿಗೆ ಉಧ್ಯೋಗವಕಾಶಗಳನ್ನು ಸೃಷ್ಠಿಸಿ, ಯುವಕರನ್ನು ಸ್ವಾವಲಂಭಿಗೊಳಿಸುವುದು ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಪರಿಣತಿಯಿಂದ ಸಾಧಿಸಲು ಮೌಲ್ಯಯುತ ಮಾಹಿತಿ ಪೂರೈಸುವ ಗುರಿ ಹೊಂದಿದೆ.


ಘನೋದ್ದೇಶ:


ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿದ್ಯಾರ್ಥಿಗಳಲ್ಲಿ ನೈತಿಕತೆ, ಹೊಣೆಗಾರಿಕೆ, ವಿಶ್ಲೇಷಣಾತ್ಮಕ ಹಾಗೂ ಸೃಜಶೀಲತೆಯೊಂದಿಗೆ ನೂತನ ವಿಧಾನಗಳನ್ನು ಬಳಸಲು ನೆರವಾಗುತ್ತದೆ. ಸೂಕ್ತ ಜ್ಞಾನದೊಂದಿಗೆ ಆದರ್ಶ ಪದವಿಧರರನ್ನು ತಯ್ಯಾರಿಸುವ ಉದ್ದೇಶ ಹೊಂದಿದ ವಿಭಾಗವು ಸಮೂಹ ಮಾಧ್ಯಮ ವಲಯದಲ್ಲಿ ನಾಯಕರನ್ನು ಸಿದ್ಧಗೊಳಿಸುತ್ತದೆ.


Top