About Prasaranga Literature is an ever flowing live reservoir, changing its modes and facets over centuries of its production, consumption and reception. To keep pace with the incessant changes in the critical paradigms of its evaluation, there is a need of equipping the students with the tools of critical reading and analysis In fulfillment of this objective of nurturing critical thinking and discourse analysis among students, Prasaranga of Rani channamma university, Belagavi has taken steady and decisive steps to shape itself into a vibrant body of knowledge dissemination and furtherance. Serving as a platform of exchanging ideas by publishing modular textbooks that can ignite students’ minds Invoking in them interest in learning and training them in requisite skills of Independent thinking. During these 14 years, Prasaranga has published a total of 68 Kannada degree textbooks, 13 annual reports, 21 other books, including 21 books under National Education Policy. It has organized a one-day National Seminar on the topic “Gadinadinalli Kannada Prajne”. It has organized 12 extension and promotional lecture series in collaboration with different affiliated colleges with great success. Hence it is a matter of great pleasure that Prasaranga is responding to the needs of all the stakeholders involved through its qualitative service and is recognized as a proud mouthpiece of Rani Channamma University.
1. ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಜ್ಞಾನದ ಕ್ಷಿತಿಜವನ್ನು ಇಮ್ಮಡಿಗೊಳಿಸಲು ಬಹುಮಾದರಿಯ ಪಠ್ಯಗಳ ಪ್ರಕಟಣೆ. 2. ಸಾಹಿತ್ಯದ ಚಿಂತನಕ್ರಮ ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ಹಲವು ಕುತೂಹಲಗಳ ಮೂಲಕ ಸಮಸ್ಯೆಗಳೆಡೆಗೆ ಪ್ರವಹಿಸುವ ಚಿಂತನಶೀಲತೆಯನ್ನು ರೂಪಿಸುವುದು. 3. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿ ದೃಢವಾದ ಬದಲಾವಣೆಗಳನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು. 4. ಅಧ್ಯಯನ, ಅಧ್ಯಾಪನ, ಸಂಶೋಧನೆಗಳಿಗೆ ಪೂರಕವಾದ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳವುದು. 5. ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವ ಕಾರ್ಯದಲ್ಲಿ ಕ್ರಿಯಾಶೀಲವಾಗಿ ಪಾಲುಗೊಳ್ಳುವುದು.
ಪದವಿ ಪಠ್ಯಗಳನ್ನು ನಮ್ಮ ಗಡಿನಾಡಿನ 3 ಜಿಲ್ಲೆಗಳ ವಿದ್ಯಾರ್ಥಿಗಳ ಅವಶ್ಯಕತೆಗಳಿಗನುಗುಣವಾಗಿ ಪೂರೈಸುವುದು. ಸಂಶೋಧನಾ ಪತ್ರಿಕೆಯನ್ನು ಪ್ರಕಟಿಸುವುದು. ‘ಇ-ವಾರ್ತಾಪತ್ರಿಕೆ’ಯನ್ನು ತ್ರೈಮಾಸಿಕವಾಗಿ ಪ್ರಕಟಗೊಳಿಸುವುದು. ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಸಿದ್ಧಪಡಿಸಿ, ಮುದ್ರಿಸುವುದು. ಪದವಿ ಪಠ್ಯಪುಸ್ತಕಗಳ ಮಾರಾಟ ಮಾಡುವುದು. ಉಪನ್ಯಾಸ ಮಾಲಿಕೆ ಹಾಗೂ ವಿಚಾರಸಂಕಿರಣಗಳನ್ನು ಏರ್ಪಡಿಸುವುದು. ರಾಜ್ಯದ ಇತರ ವಿಶ್ವವಿದ್ಯಾಲಯಗಳ ಪ್ರಸಾರಾಂಗದೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು.
Page Under Development...!
ಪ್ರಸಾರಾಂಗವು ಈವರೆಗೂ 47 ಕನ್ನಡ ಪದವಿ ಪಠ್ಯಪುಸ್ತಕಗಳನ್ನು. 08 ವಾರ್ಷಿಕ ವರದಿಗಳನ್ನು, 03 ಇತರೆ ಪುಸ್ತಕಗಳನ್ನು ಪ್ರಕಟಿಸಿದೆ. ‘ವಿವಾಹ ಪೂರ್ವ ಕಾನೂನು ತಿಳಿವಳಿಕೆ’ ಎಂಬ ರಾಜ್ಯ ಮಟ್ಟದ ಕಾರ್ಯಗಾರ ಏರ್ಪಡಿಸುವ ಮೂಲಕ ಸಮಾಜಮುಖಿ ಚಿಂತನೆಯತ್ತ ಮುಖ ಮಾಡಿದೆ. “ಇ-ವಾರ್ತಾಪತ್ರಿಕೆ”ಯನ್ನು ಹೊರತರುವ ಮೂಲಕ ವಿಶ್ವವಿದ್ಯಾಲಯದ ಶೈಕ್ಷಣಿಕ ಮಾಹಿತಿಯನ್ನು ಪ್ರಚಾರ ಮಾಡುವ ಹಾಗೂ ದಾಖಲೀಕರಣದಂತಹ ಭಿನ್ನಮಾದರಿಯ ಕಾರ್ಯಗಳಿಂದ ಅಭಿನಂದನೆಗೆ ಅರ್ಹವಾಗಿದೆ. ಈ ನಿಟ್ಟಿನಲ್ಲಿ ತನ್ನ ಕಾರ್ಯಕ್ಷಮತೆಯ ಕ್ಷಿತಿಜವನ್ನು ಇಮ್ಮಡಿಗೊಳಿಸಿದ ಪ್ರಸಾರಾಂಗವು, 11 ವಿಸ್ತರಣಾ ಮತ್ತು ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿದೆ. ಅದರಂತೆ ವಿಶ್ವವಿದ್ಯಾಲಯದ ಅವಶ್ಯಕ ಮಾಹಿತಿಗಳನ್ನು ಒಂದೆಡೆ ದಾಖಲಿಸುವ ಹಾಗೂ ಪ್ರಮುಖ ವಿಷಯಗಳನ್ನು, ಆಯೋಜಿತ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ‘ಇ’ ಪತ್ರಿಕೆಯನ್ನು ಹೊರ ತರುವ ಮುಖಾಂತರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಮ್ಮೆಯ ಮುಖವಾಣಿಯಾಗುತ್ತಿರುವುದು ಅತೀವ ಸಂತೋಷದ ಸಂಗತಿ.
1. ‘ಪ್ರಚಾರೋಪನ್ಯಾಸ ಮಾಲೆ’ ಯ ಸರಣಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಮಹಾವಿದ್ಯಾಲಯಗಳು, ಸಂಶೋಧನಾಲಯಗಳು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ನಡೆಸುವುದು. 2. ವಿಶ್ವವಿದ್ಯಾಲಯದ ಬಹುಶಿಸ್ತೀಯ ಜರ್ನಲ್ (ಸಂಶೋಧನಾ ಪತ್ರಿಕೆ) ಅನ್ನು ನಾಲ್ಕು ತಿಂಗಳಿಗೊಮ್ಮೆ ಪ್ರಕಟಿಸುವುದು. 3. ವರ್ಷಕ್ಕೆ ಕನಿಷ್ಠ ಎರಡು ವಿಚಾರಸಂಕಿರಣಗಳನ್ನು ಏರ್ಪಡಿಸುವುದು. 4. ವಿಸ್ತರಣಾ ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸುವುದು. 5. ಪ್ರಚಾರೋಪನ್ಯಾಸ ಮಾಲೆಗಳ ಲೇಖನಗಳನ್ನು ಪ್ರಕಟಿಸುವುದು. 6. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಮುಖಾಂತರ ಅವರ ಸಂಶೋಧನೆ ಹಾಗೂ ಸಾಧನೆಗೆ ಸಂಬಂಧಿಸಿದ ಗ್ರಂಥಗಳನ್ನು ಬರೆಯಿಸಿ, ಪ್ರಕಟಿಸುವುದು. 7. 2018-19 ಮತ್ತು ನಂತರದ ಸಾಲಿನ ವಾರ್ಷಿಕ ವರದಿಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಿಸುವುದು. 8. ಸ್ನಾತ್ತಕ ತರಗತಿಗಳಿಗೆ ಅವಶ್ಯಕ ಮತ್ತು ಐಚ್ಛಿಕ ಕನ್ನಡ ಪದವಿ ಪಠ್ಯಪುಸ್ತಕಗಳನ್ನು ಮುದ್ರಣ ಮಾಡುವುದು. 9. ವಿಶ್ವವಿದ್ಯಾಲಯದ ಕೈಪಿಡಿಯನ್ನು ತಯಾರಿಸಿ, ಮುದ್ರಣ ಮಾಡುವುದು. 10. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಯ ಸಾಹಿತಿಗಳ ಲೇಖನಗಳನ್ನು ಪ್ರಸಾರಾಂಗದಿಂದ ಪ್ರಕಟಿಸುವುದು. 11. ವಿಶ್ವವಿದ್ಯಾಲಯದ ದಶಮಾನೋತ್ಸವ ಪ್ರಯುಕ್ತ ವಿಶೇಷ ಸಂಚಿಕೆಯನ್ನು ಪ್ರಕಟಿಸುವುದು. 12. ವಿಶ್ವವಿದ್ಯಾಲಯದ ದಶಮಾನೋತ್ಸವ ಪ್ರಯುಕ್ತ ವಿವಿಧ ವಿಭಾಗಗಳು ಏರ್ಪಡಿಸಲಿರುವ ವಿಚಾರಸಂಕಿರಣಗಳ ಆಯ್ದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು.
1. Prasaranga-Annual-Report-2015-16-RCU Click to view 2. Prasaranga-Annual-Report-2016-17-RCUClick to view 3. Prasaranga-Annual-Report-2017-18-RCUClick to view 4. Prasaranga-Annual-Report-2018-19-RCUClick to view