ಕುರಿತು:
ಜಮಖಂಡಿಯು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಪ್ರಸಿದ್ದ ತಾಲೂಕು. ಜಮಖಂಡಿಯು ಬ್ರಿಟಿಷ್ ಭಾರತದ ಮರಾಠಾ ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿತ್ತು. ಮತ್ತು ಇದನ್ನು ನಂತರ ಮುಂಬೈ ಪ್ರೆಸಿಡೆನ್ಸಿಯ ಭಾಗವಾಗಿ, ಡೆಕ್ಕನ್ ಸ್ಟೇಟ್ಸ್ ಏಜೆನ್ಸಿಯಿಂದ ಆಡಳಿತ ಮಾಡಲಾಗುತ್ತಿತ್ತು. ಜಮಖಂಡಿಯನ್ನು 1894 ರಲ್ಲಿ ಗೋಪಾಲ್ ರಾವ್ ಪಟವರ್ಧನ ರವರು (1799-1840)ರಲ್ಲಿ ಸ್ಥಾಪಿಸಿದರು. ಇವರು ಬಹಳ ಸಮರ್ಥ ಆಡಳಿತಗಾರರಾಗಿದ್ದರು. ರಾಮಚಂದ್ರರಾವ್ ಗೋಪಾಲ್ ರಾವ್ ಪಟವರ್ಧನ ಇವರು (1833-1897) ರಲ್ಲಿ ಅಧಿಕಾರ ವಹಿಸಿಕೊಂಡರು ಮತ್ತು ಅವರ ರಾಜಧಾನಿಯನ್ನು ರಾಮತೀರ್ಥಕ್ಕೆ ಸ್ಥಳಾಂತರಿಸಿಕೊಂಡರು. ಅದು ಹಳೇಯ ರಾಮೇಶ್ವರ ದೇವಾಲಯದ ಪಕ್ಕದಲ್ಲಿರುವ ಬೆಟ್ಟವಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಜಮಖಂಡಿಯಲ್ಲಿ ವಾಣಿಜ್ಯಶಾಸ್ತ್ರ (ಎಮ್.ಕಾಂ) ಮತ್ತು ಎಮ್.ಎ. ರಾಜ್ಯಶಾಸ್ತ್ರ ಎರಡು ವಿಭಾಗಗಳನ್ನು ಸ್ಥಾಪಿಸಲಾಗಿದೆ. ಇದು ಆಗಸ್ಟ 2017ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 07ನೇ ಪ್ರಕಟಣೆಯ ಮೂಲಕ ಸ್ಥಾಪಿಸಲ್ಪಟ್ಟಿದೆ.
ಜ್ಞಾನ ಮತ್ತು ಸಂಶೋಧನೆಯ ವಿವಿಧ ಬೋಧನೆ ಹಾಗೂ ಸಂಶೋಧನೆ ಕೈಗೊಳ್ಳುವಲ್ಲಿ ಹೆಚ್ಚಿನ ಗುಣಮಟ್ಟದ ಕೊಡುಗೆಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರವು ಸ್ಥಾಪನೆಗೊಂಡಿದೆ. ಇದರ ಸಾಮಾಜಿಕ ಕಾಳಜಿಗಳು ವಕಾಲತ್ತು ಮತ್ತು ಪ್ರಭಾವ ವೃತ್ತಿಪರ ಪುಷ್ಟೀಕರಣ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಶ್ವಾಸದಲ್ಲಿ ಪ್ರತಿಬಿಂಬಿತವಾಗಿದೆ. ಕರ್ನಾಟಕ ರಾಜ್ಯದ ವಿವಿಧ ಮೂಲೆಗಳಿಂದ ಗ್ರಾಮೀಣ ಮತ್ತು ನಗರಗಳಿಂದ
ದೃಷ್ಠಿಕೋನ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಜಮಖಂಡಿಯು ಸಮಾಜ ಮತ್ತು ವಿದ್ಯಾರ್ಥಿಗಳ ಮೇಲೆ ಶಾಶ್ವತವಾದ ಕಲಿಕೆಯ ಬೆಳವಣಿಗೆ, ನವೀನತೆ, ಸೃಜನಶೀಲತೆ ಮತ್ತು ಶಿಕ್ಷಣ, ಸಂಶೋಧನೆ ಹಾಗೂ ಉತ್ಕøಷ್ಟತೆಗಳ ಮೂಲಕ ಬಹಳ ಪರಿಣಾಮಕಾರಿ ಪ್ರಭಾವ ಬೀರುವುದು ಮತ್ತು ಆರ್ಥಿಕ, ಸಾಮಾಜಿಕ ಹಾಗೂ ಪರಿಸರ ಸಂಕ್ಷೀಪ್ತತೆಯನ್ನು ನೀಗಿಸಲು ಅಗತ್ಯವಾದ ಸಲಹೆ ಮೂಲಕ ವಿದ್ಯಾರ್ಥಿಗಳನ್ನು ವಿಶ್ವ ದರ್ಜೆ ಮಾನವಶಕ್ತಿಯನ್ನು ಬಯಸುತ್ತದೆ.
ಧ್ಯೇಯೋದ್ದೇಶ:
* ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಬೆಳೆಸಲು ಸ್ನಾತಕೋತ್ತರ ಕೇಂದ್ರ, ಜಮಖಂಡಿಯು ವಿಶ್ವವರ್ಗ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ನಿರ್ಮಿಸಲು ಬದ್ದವಾಗಿದೆ.
* ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳು ಮತ್ತು ಸಲಹಾಶಾಸ್ತ್ರದಲ್ಲಿ ಚಿಂತನದ ಮುಕ್ತ ವಿನಿಮಯಕ್ಕೆ ಸಹಯೋಗದ ಅಂತರಶಿಕ್ಷಣವನ್ನು ರಚಿಸುವುದು.
* ಪ್ರಸ್ತುತ ಸನ್ನಿವೇಶದ ನಿರ್ಬಂಧಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಕ್ರೀಯಗೊಳಿಸಲು ವೃತ್ತಿಪರತೆಯನ್ನು ವೃದ್ಧಿಸುವುದು.
* ವಿಷಯದ ಬೌದ್ಧಿಕ ಸಂವಾದವನ್ನು ಉತ್ತೇಜಿಸುವ ಪರಿಸರವನ್ನು ಸೃಷ್ಟಿಸಲು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕವಾಗಿ ತಲುಪುವುದು.
ಉದ್ಧೇಶ:
* ಜ್ಞಾನ ಆಧಾರಿತ ವಿದ್ಯಾರ್ಥಿಗಳ ಸಮಾಜವನ್ನು ಸಂಶೋಧನೆ, ಪ್ರಕಟಣೆ ಮತ್ತು ಜಗತ್ತಿನಾದ್ಯಂತ ಸಮರ್ಥಿಸುವ ಮೂಲಕ ಉತ್ತೇಜಿಸುವುದು.
* ಎಲ್ಲಾ ವಿಷಯಗಳ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕರಿಗೆ ಶೈಕ್ಷಣಿಕ ಉತ್ಸಾಹವನ್ನು ವರ್ಧಿಸುವುದು.
ಮೌಲ್ಯ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಜಮಖಂಡಿಯಲ್ಲಿ ಆಜೀವ ಕಲಿಕೆ, ಸಮಗ್ರತೆ ಮತ್ತು ತಾಂತ್ರಿಕ ಪ್ರಗತಿ, ಸಹಯೋಗ ಮತ್ತು ವೈವಿಧ್ಯತೆಗಳ ಮೂಲಕ ಯಶಸ್ಸಿನ ನೈತಿಕ ಪೂರ್ವವೀಕ್ಷಣೆಯನ್ನು ಆಧರಿಸಿ ವಿದ್ಯಾರ್ಥಿಗಳು ಶ್ರೇಷ್ಠತೆಯನ್ನು ಪೂರೈಸುವುದಾಗಿದೆ.