ಸ್ನಾತಕೋತ್ತರ ಕೇಂದ್ರದ ಬಗ್ಗೆ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2010 ರಲ್ಲಿ ಅಸ್ತಿತ್ವಕ್ಕೆ ಬಂದಿತು, ಇದು ಉತ್ತರ ಕರ್ನಾಟಕ ಮತ್ತು ಅದರ ಸುತ್ತಮುತ್ತಲಿನ ಬೆಳಗಾವಿ,ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸುತ್ತದೆ;
ಡಾ.ಪಿ.ಜಿ.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ತೊರವಿ ವಿಜಯಪುರವು ಪ್ರಾರಂಭದಿಂದಲೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇದರ ಭಾಗವಾಗಿದೆ. 31 ಎಕರೆ ಆವರಣ ಪ್ರದೇಶವನ್ನು ಹೊಂದಿರುವ ಈ ಕೇಂದ್ರವು ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಸಮಾಜ ಕಾರ್ಯ, ಇಂಗ್ಲೀಷ, ವಾಣಿಜ್ಯಶಾಸ್ತ್ರ, ಕನ್ನಡ ಶಾಸ್ತ್ರೀಯ ಅಧ್ಯಯನ ಮತ್ತು ಗಣಕ ವಿಜ್ಞಾನದಂತಹ ವಿವಿಧ ವಿಭಾಗಗಳಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ವಿಷಯ ಮತ್ತು ಪ್ರವಾಸೋದ್ಯಮದಲ್ಲಿ ಒಂದು ವರ್ಷದ ಪಿ.ಜಿ. ಡಿಪ್ಲೊಮಾ ವಿಷಯವನ್ನು ಅನ್ನು ನೀಡುತ್ತಿದೆ. ಈ ಕೇಂದ್ರದಲ್ಲಿ 80% ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್ಸಿ/ಎಸ್ಟಿ/ಒಬಿಸಿ/ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಮತ್ತು ಅವರಲ್ಲಿ 50% ಜನರು ಗ್ರಾಮೀಣ ಪ್ರದೇಶದ ಹಿನ್ನೆಲೆಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಹ ಬೋಧಕ ಸಿಬ್ಬಂದಿ ಇದೆ. ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಸ್ನಾತಕೋತ್ತರ ಕೇಂದ್ರವು ಇತಿಹಾಸ ಮತ್ತು ಪುರಾತತ್ವಶಾಸ್ತ್ರ, ಗಣಕ ವಿಜ್ಞಾನ, ಆಂಗ್ಲಭಾ಼ಷಾ, ವಾಣಿಜ್ಯ ಮತ್ತು ಕನ್ನಡದಲ್ಲೂ ಪಿ.ಹೆಎಚ್.ಡಿ ಕಾರ್ಯಕ್ರಮವನ್ನು ನೀಡುತ್ತಿದೆ
.
ವಿಶ್ವವಿದ್ಯಾಯದ ಪರೀಕ್ಷೆಗಳಲ್ಲಿ ಹಲವಾರು ಶ್ರೇಣಿಗಳನ್ನು ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯು ತುಂಬಾ ಹೆಚ್ಚಾಗಿದೆ ಎಂದು ಗಮನಿಸಲಾಗುತ್ತಿದೆ. ಈ ಕೇಂದ್ರವು 20 ಎಮ್ ಬಿ ಪಿ ಎಸ್{ಬಿ ಎಸ್ ಎನ್ ಎಲ್} ಬ್ರಾಡ್ ಬ್ಯಾಂಡ ಗುತ್ತಿಗೆ ಲೈನ್ ಇಂಟರನೆಟ್ ಸಂಪರ್ಕವನ್ನು ಹೊಂದಿದೆ. ಸಾಕಷ್ಟು ಡಿಜಿಟಲ್ ಇ-ಸಂಪನ್ಮೂಲಗಳ ಸೌಲಭ್ಯದೊಂದಿಗೆ ಉತ್ತಮವಾಗಿ ಸ್ಥಾಪಿತವಾದ ಕಂಪ್ಯೂಟರ ಲ್ಯಾಬ್ ಮತ್ತು ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಇತ್ತೀಚಿಗೆ ಗ್ರಂಥಾಲಯವು ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನಲೈನ್ ಸಂಪನ್ಮೂಲಗಳನ್ನು ಒದಗಿಸಲು ಇ-ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನು ಪರಿಚಯಿಸಿದೆ.
.