ವಿದ್ಯಾರ್ಥಿ ಕಲ್ಯಾಣ ವಿಭಾಗ

ಪರಿಚಯ :
ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ನೀತಿಗಳನ್ನು ಕಾರ್ಯಗತಗೊಳಿಸಲು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2011 ರಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗವನ್ನು ಸ್ಥಾಪಿಸಿದೆ. ವಿಶ್ವವಿದ್ಯಾಲಯದ ಮುಖ್ಯ ಆವರಣ, ವಿಜಯಪುರ, ಬಾಗಲಕೋಟ ಮತ್ತು ಜಮಖಂಡಿಯಲ್ಲಿರುವ ಸ್ನಾತಕೋತ್ತರ ಕೇಂದ್ರಗಳ ಹಾಗೂ ಘಟಕ ಮಹಾವಿದ್ಯಾಲಯ, ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ವಿವಿಧ ಕಾರ್ಯಕ್ರಮಗಳು ಈ ವಿಭಾಗದ ವ್ಯಾಪ್ತಿಗೆ ಬರುತ್ತವೆ. ವಿದ್ಯಾರ್ಥಿ ಕಲ್ಯಾಣ ವಿಭಾಗವು ಹಾಸ್ಟೇಲ್‍ಗಳು ಎನ್.ಎಸ್.ಎಸ್., ರೆಡ್ ಕ್ರಾಸ್, ಎಸ್ಸಿ/ಎಸ್.ಟಿ ಮತ್ತು ಓಬಿಸಿ ಸೆಲ್ ವಿದ್ಯಾರ್ಥಿಗಳ ಜಿಮಖಾನಾ ಕಾರ್ಯಕ್ರಮಗಳು ಮತ್ತು ಯುವಜನೋತ್ಸವ, ಕಲ್ಯಾಣ ಯೋಜನೆಗಳು, ಚೆನ್ನಮ್ಮ ಯುವ ಸಂಭ್ರಮ, ವಿದ್ಯಾರ್ಥಿಗಳ ಕುಂದುಕೊರತೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತದೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾಗಿ ಪ್ರೊ.ಚಂದ್ರಿಕಾ ಕೆ. ಬಿ. ಕಾರ್ಯ ನಿರ್ವಹಿಸುತ್ತಿದ್ದಾರೆ.

ಉದ್ದೇಶಗಳು :
• ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಮತ್ತು ಸಹಶೈಕ್ಷಣಿಕ ಆಸಕ್ತಿಗಳನ್ನು ಉತ್ತೇಜಿಸುವುದು.
• ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಶ್ವವಿದ್ಯಾಲಯದ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಸಮನ್ವಯಗೊಳಿಸುವುದು.
• ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುವುದು ಮತ್ತು ಅವರ ಸುಪ್ತ ಪ್ರತಿಭೆಗಳನ್ನು ಹೊರತರುವುದು.
• ವಿದ್ಯಾರ್ಥಿಗಳಲ್ಲಿ ಒಳ್ಳೆಯ ಮೌಲ್ಯಗಳು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು.


ವಿದ್ಯಾರ್ಥಿ ಕಲ್ಯಾಣಕ್ಕೆ ಸಂಬಂಧಿಸಿದ ಕೋಶಗಳು ಮತ್ತು ವಿಭಾಗಗಳು.
1. ವಿದ್ಯಾರ್ಥಿ ಜಿಮ್ಖಾನಾ.
2. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೋಶ
3. ಓಬಿಸಿ ಕೋಶ
4. ಆರೋಗ್ಯ ಕೇಂದ್ರ.
5. ಉದ್ಯೋಗಾವಕಾಶ ಕೋಶ.
6. ವಿದ್ಯಾರ್ಥಿ ಆಪ್ತ ಸಮಾಲೋಚನಾ ಕೋಶ
7. ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಲಹಾ ಸಮಿತಿ.
8. ಯುವ ರೆಡ್ ಕ್ರಾಸ್.
9. ಹಳೆಯ ವಿದ್ಯಾರ್ಥಿಗಳ(Allumni)ಸಂಘ.
10. ವಿದ್ಯಾರ್ಥಿ ಕುಂದುಕೊರತೆ ಮತ್ತು ಪರಿಹಾರ ಕೋಶ.
11. ರಾಗಿಂಗ್ ವಿರೋಧಿ (Anti Raging) ಕೋಶ
12. ಮಹಿಳಾ ಸಬಲೀಕರಣ ಕೋಶ.
13. ಲೈಂಗಿಕ ಕಿರುಕುಳ ವಿರೋಧಿ ಕೋಶ (ICC- Internal Complaint Cell)
14. ಎನ್.ಎಸ್.ಎಸ್. ಕೋಶ


Top